ದಿನದ ಸುದ್ದಿ

ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ

Published

on

ಸುದ್ದಿದಿನ,ದಾವಣಗೆರೆ : ಶ್ರೀ ಚೌಡೇಶ್ವರಿ ಜಾತ್ರೆಯ ಸಂಭ್ರಮ ವಿನೋಬನಗರದ ಮೊದಲನೇ ಮೇನ್ ಹತ್ತನೇ ಕ್ರಾಸ್ ನಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲೂ ಮನೆ ಮಾಡಿತ್ತು.

ಜಾತ್ರೆ ಪ್ರಯುಕ್ತ ಚೌಡೇಶ್ವರಿ ದೇವಿಯ ಮೂರ್ತಿಯ ಮೆರವಣಿಗೆ ವೈಭವದಿಂದ ನೆರವೇರಿತು. ಈ ಮೆರವಣಿಗೆಗೆ ಜಿ. ಶಿವಯೋಗಪ್ಪ ಅವರು ಚಾಲನೆ ನೀಡಿದರು.

ದೇವಿಯ ಮೂರ್ತಿಯ ಮೆರವಣಿಗೆಯು ದೇವಸ್ಥಾನದಿಂದ ಹೊರಟು ವಿನೋಬನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು. ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಅಲ್ಲದೆ ವಿಶೇಷವಾಗಿ ಪುಷ್ಪಾಲಂಕಾರಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಭಕ್ತರು ದೇವಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಟಿ. ದಾಸಕರಿಯಪ್ಪ, ನೀಲಕಂಠಪ್ಪ, ಮೂರ್ಥ್ಯಪ್ಪ, ವಕೀಲರಾದ ದಿವಾಕರ್, ವಿಜಯ ಸಾವಂತ್, ಯಲ್ಲಪ್ಪ ಪವರ್, ಮಂಜುನಾಥ್, ಮಹಾದೇವ್, ಹುಲಿಗೇಶ್, ಚನ್ನಬಸಪ್ಪ ಸ್ವಾಮಿ, ಬಸವಲಿಂಗಪ್ಪ, ರಾಕೇಶ್ ಪಿ., ಕಿರಣ್, ಶ್ರೀಕಾಂತ್ ಸೇರಿದಂತೆ ಮತ್ತಿತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version