ದಿನದ ಸುದ್ದಿ

ಎಸ್ಸೆಸ್ಸೆಲ್ಸಿ ಟಾಪರ್ ಗೆ ಸಿಎಂ ಯೋಗಿ ಕೊಟ್ಟ ಚೆಕ್ ಬೌನ್ಸ್..!

Published

on

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶ ರಾಜ್ಯದ ಎಸ್ಸೆಸ್ಸೆಲ್ಸಿ ಟಾಪರ್ ವಿದ್ಯಾರ್ಥಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ನೀಡಿದ ಚೆಕ್ ಎರಡೇ ದಿನದಲ್ಲಿ ಬೌನ್ಸ್ ಆಗಿದ್ದು, ಪ್ರತಿಭಾವಂತ ವಿದ್ಯಾರ್ಥಿ ನಿರಾಸೆ ಮೂಡಿಸಿದಲ್ಲದೇ ಬ್ಯಾಂಕ್ ಗೆ ದಂಡ ಸಹ ಕಟ್ಟಿದ್ದಾನೆ.

ಉತ್ತರ ಪ್ರದೇಶ ರಾಜ್ಯದ ಬೋರ್ಡ್ ಪರೀಕ್ಷೆಯಲ್ಲಿ ಶೇ‌. 93.5 ಅಂಕ ಗಳಿಸುವ ಮೂಲಕ ವಿದ್ಯಾರ್ಥಿ ಅಲೋಕ್ ಮಿಶ್ರಾ ರಾಜ್ಯಕ್ಕೆ ಏಳನೇ ಸ್ಥಾನ ಪಡೆದಿದ್ದ. ಲಕ್ನೋದಲ್ಲಿ ಮೇ 29ರಂದು ನಡೆದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿದ್ಯಾರ್ಥಿ ಅಲೋಕ್ ಗೆ ಒಂದು ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದನ್ನು ಸಂತೋಷದಿಂದ ಸ್ವೀಕರಿಸಿದ್ದ. ಎರಡು ದಿನದ ನಂತರ ತನ್ನ ಖಾತೆಗೆ ಜಮಾ ಮಾಡಲು ಬ್ಯಾಂಕ್ ಗೆ ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಬೌನ್ಸ್ ಆಗಿದ್ದಕ್ಕೆ ಬ್ಯಾಕ್ ನವರು ದಂಡ ಕಟ್ಟಿಸಿಕೊಂಡಿದ್ದಾರೆ.

ಇದರಿಂದ ವಿದ್ಯಾರ್ಥಿಗೆ ತೀವ್ರ ಬೇಸರ ಉಂಟಾಗಿದೆ. ಬರಬಂಕಿ ಡಿಸ್ಟ್ರಿಕ್ಟ್‌ ಇನ್ಸ್‌ಪೆಕ್ಟರ್ ಆಫ್ ಸ್ಕೂಲ್ ಅಧಿಕಾರಿ ರಾಜಕುಮಾರ್ ಯಾದವ್ ಅವರ ಸಹಿಯುಳ್ಳ ಚೆಕ್ ನೀಡಲಾಗಿತ್ತು. ಈ ಪ್ರಕರಣ ನಡೆದ ನಂತರ ವಿದ್ಯಾರ್ಥಿ ಅಲೋಕ್ ಸಂಬಂಧಿಸಿದ ಅಧಿಕಾರಿಯನ್ನು ಭೇಟಿ ಮಾಡಿದಾಗ ಸಮಸ್ಯೆಯನ್ನು ಬಗಹರಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಉದಯ್ ಭಾನು ತ್ರಿಪಾಠಿ, “ಯಾವುದೇ ಅಕ್ರಮ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಸುದ್ದಿದಿನ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version