ದಿನದ ಸುದ್ದಿ
ಮೃಗಾಲಯದ ಕಪ್ಪು ಚಿರತೆ ದತ್ತು ಸ್ವೀಕಾರ
ಸುದ್ದಿದಿನ,ಮೈಸೂರು : ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಮೈಸೂರಿನ ಅಭಿಜ್ಞಾ ಈಶ್ವರ್ ರಾವ್ ಅವರು 35,000 ರೂ. ಪಾವತಿಸಿ ಮೃಗಾಲಯದ ಕಪ್ಪು ಚಿರತೆಯನ್ನು 04-11-2020 ರಿಂದ 03-11-2021 ರ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಅಭಿಜ್ಞಾ ಈಶ್ವರ್ ರಾವ್ ಅವರಿಗೆ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243