ದಿನದ ಸುದ್ದಿ

ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ತಿಂದ ಚಿರತೆ ; ಗ್ರಾಮಸ್ಥರಲ್ಲಿ ಆತಂಕ

Published

on

ಬ್ರೇಕಿಂಗ್ | ಸುದ್ದಿದಿನ,ಮಂಡ್ಯ : ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ರಾತ್ರಿ ಮಲಗಿದ್ದ ಸಮಯದಲ್ಲಿ ಚಿರತೆ ಬಂದು ನಾಯಿ ತಿಂದು ಹಾಕಿರೋ ಘಟನೆ ಮಂಡ್ಯ ತಾಲೂಕಿನ ಉರುಮಾರಕಸಲಗೆರೆ ಗ್ರಾಮದಲ್ಲಿ ನಡೆದಿದೆ.

ಉರಮಾರಕಸಲಗೆರೆಯ ಮಂಜು ಎಂಬುವರಿಗೆ ಸೇರಿದ ಡಾಬರ್ ಮೆನ್ ನಾಯಿಯನ್ನು ಚಿರತೆ ತಿಂದುಹಾಕಿದ್ದು, ಚಿರತೆ ನಾಯಿ ತಿಂದಿರೋದನ್ನು ನೋಡಿ ಕುಟುಂಬದವರು ಆತಂಕಗೊಂಡಿದ್ದಾರೆ. ಚಿರತೆ ಊರಿಗೆ ಬಂದು ನಾಯಿ ತಂದಿರೋ ಸುದ್ದಿ ತಿಳಿದು ಗ್ರಾಮಸ್ಥರಲ್ಲಿ ಚಿರತೆ ಭಯದ ಆತಂಕ ಮೂಡಿದೆ. ಚಿರತೆ ಭಯದಿಂದ ಮನೆಯಿಂದ ಹೊರ ಬರಲು ಗ್ರಾಮಸ್ಥರು ಭಯಪಡುತ್ತಿದ್ದಾರೆ. ಈ ಸಂಬಂಧ ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿ ಗ್ರಾಮಸ್ಥರ ಮನವಿ ಮಾಡಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version