ದಿನದ ಸುದ್ದಿ
ಚಿರತೆ ಮರಿ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕರು
ಸುದ್ದಿದಿನ, ಮೈಸೂರು: ಹುಣಸೂರು ತಾಲೂಕಿನ ಮೈಲಾಂಬೂರು ಗ್ರಾಮದಲ್ಲಿ ಗ್ರಾಮದ ಪ್ರಮೋದ್ ಎಂಬುವವರ ಜಮೀನಿನಲ್ಲಿ ಚಿರತೆ ಮರಿ ಕಾಣಿಸಿಕೊಂಡಿದ್ದ, ಚಿರತೆ ಮರಿ ಕಂಡೊಡನೆ ಬೀದಿ ನಾಯಿಗಳು ದಾಳಿಮಾಡಿರುವ ಘಟನೆ ನಡೆದಿದೆ.
ಈ ವೇಳೆ ಜಮೀನು ಕೆಲಸಕ್ಕೆ ತೆರಳುತ್ತಿದ್ದ ಮಹೇಂದ್ರ ಸಾಗರ್ ರಾಜು ಗೋವಿಂದ ನಟರಾಜ್ ಕಪಾಲಿ ರವಿ ಎಂಬ ಯುವಕರು ನಾಯಿ ದಾಳಿಯೆಂದ ಚಿರತೆ ಮರಿ ರಕ್ಷಣೆಮಾಡಿದ್ದಾರೆ.
ಕೂಡಲೆ ಅರಣ್ಯ ಇಲಾಖೆ ಹಾಗೂ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಚಿರತೆ ಮರಿಯನ್ನು ಯುವಕರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243