ದಿನದ ಸುದ್ದಿ
ನವಿಲೇಹಾಳು | ಕೆಮಿಕಲ್ ನೀರು ಕುಡಿದು ಗ್ರಾಪಂ ಅಧ್ಯಕ್ಷೆಯ ಪತಿ ಅಸ್ವಸ್ಥ ; ಪ್ರಕರಣ ದಾಖಲು
ಸುದ್ದಿದಿನ, ಚನ್ನಗಿರಿ : ಕುಡಿಯುವ ನೀರಿನ ಬಾಟಲಿಯೊಳಗೆ ಯಾವುದೋ ರಾಸಾಯನಿಕ ಮಿಶ್ರಣ ಮಾಡಿದ ನೀರು ಕುಡಿದು ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಪಂ ಅಧ್ಯಕ್ಷೆಯ ಪತಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಸಂತೆಬೆನ್ನೂರು ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಗ್ರಾಪಂ ಅಧ್ಯಕ್ಷರ ಕೊಠಡಿಗೆ ಗ್ರಾಮದ ಮಾಲತೇಶ ಎಂಬ ವ್ಯಕ್ತಿ ಪ್ರವೇಶಿಸಿ, ಅಧ್ಯಕ್ಷರ ಟೇಬಲ್ ಮೇಲಿದ್ದ ನೀರಿನ ಬಾಟಲಿಯೊಳಗೆ ಏನೋ ಹಾಕಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಘಟನೆ ವಿವರ
ನವಿಲೇಹಾಳು ಗ್ರಾಮದ ಗ್ರಾಪಂ ಅಧ್ಯಕ್ಷೆ ಬಿ. ಎಚ್. ಶಬ್ನಂ ಅವರ ಪತಿ ಮೋಸಿಂಆಕಿಲ್ ಎಂಬುವವರು ರಾಸಾಯನಿಕ ಮಿಶ್ರಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾದವರು. ಜೂ.4ರಂದು ಘಟನೆ ನಡೆದಿದ್ದು, ಅಂದು ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷರ ಟೇಬಲ್ ಮೇಲಿದ್ದ ಬಾಟಲಿಯ ನೀರನ್ನು ಅಧ್ಯಕ್ಷೆಯ ಪತಿ ಮೋಸಿಂ ಅಕಿಲ್ ಕುಡಿದಿದ್ದಾರೆ.
ತಕ್ಷಣವೇ ತಲೆಸುತ್ತು ಬಂದು ಸುಸ್ತಾಗಿದ್ದು, ಗ್ರಾಪಂ ಕಾರ್ಯದರ್ಶಿ ಟೋಕ್ಯನಾಯ್ಕ, ಸಿಬ್ಬಂದಿ ತ್ಯಾವಣಿಗೆ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಗ್ರಾಪಂ ಅಧ್ಯಕ್ಷರ ಪತಿ ರಾಸಾಯನಿಕ ಮಿಶ್ರಣದ ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಗ್ರಾಪಂ ಗುಣಮುಖರಾಗಿದ್ದು,ಜೂ.7ರಂದು ಸಂತೆಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243