/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಕ್ರೀಡೆ

ದೇಶದ ಕೀರ್ತಿ ಪತಾಕೆ ಹಾರಿಸಿದ 12 ವರ್ಷದ ಬಾಲಕ !

ವಿಶ್ವದ ಎರಡನೇ ಅತಿ ಕಿರಿಯ ಚೆಸ್ ಗ್ರಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ ಚೆನ್ನೈ ಬಾಲಕ

Published

on

ಸುದ್ದಿದಿನ  ಡೆಸ್ಕ್: ಚೆನ್ನೈನ 12 ವರ್ಷದ ಬಾಲಕ ಆರ್. ಪ್ರಗ್ಗ್ನಾನಂದ ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾನೆ.

ಶನಿವಾರ ನಡೆದ ಚೆಸ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆರ್. ಪ್ರಗ್ಗ್ನಾನಂದ ವಿಶ್ವದ ಎರಡನೇ ಅತಿ ಕಿರಿಯ ಚೆಸ್ ಗ್ರಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ್ದಾನೆ. ಈಗ ಪ್ರಗ್ಗ್ನಾನಂದನಿಗೆ ಕೇವಲ 12 ವರ್ಷದ 10 ತಿಂಗಳ 14 ದಿನಗಳ ವಯಸ್ಸು ಮಾತ್ರ.

ಮೊದಲ ಕಿರಿಯ ಗ್ರಾಂಡ್ ಮಾಸ್ಟರ್

1990ರಲ್ಲಿ ಉಕ್ರೇನಿಯನ್ ನಡೆದ ಪಂದ್ಯದಲ್ಲಿ 12 ವರ್ಷ 7 ತಿಂಗಳು ವಯಸ್ಸಿನ ಜಿಎಂ ಸೆರ್ಗೆಯ್ ಕರಾಜಕಿನ್ ಎಂಬ ಬಾಲಕ  ಕಿರಿಯ ಗ್ರಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದರು.

ಇಟಲಿಯ ಒರ್ಟಿಸಿಯಲ್ಲಿ ನಡೆದ ಗ್ರೆಡಿನ್ ಓಪನ್ನಲ್ಲಿ ಆಡುತ್ತಿರುವ ಪ್ರಗ್ಗ್ನಾನಂದ 8 ನೇ ಸುತ್ತಿನಲ್ಲಿ ಇಟಾಲಿಯನ್ ಗ್ರಾಂಡ್ಮಾಸ್ಟರ್ ಲೂಕಾ ಮೊರೊನಿ ಜೂನಿಯರ್ ಅವರನ್ನು ಸೋಲಿಸಿದ್ದಾನೆ. ಮೊದಲ ಸುತ್ತಿನಿಂದಲೂ ಪರಿಣಾಮಕಾರಿ ಆಟ ಆಡಿದ ಪ್ರಗ್ಗ್ನಾನಂದ ಕೊನೆಯ ವರೆಗೂ ರೋಚಕ ಆಟವಾಡಿದ.

ಚೆನ್ನೈ ಹುಡುಗ ಆರ್. ಪ್ರಗ್ಗ್ನಾನಂದ 2017 ರಲ್ಲಿ ವಿಶ್ವ ಜೂನಿಯರ್ಸ್ GM ಪ್ರಶಸ್ತಿ ಪಡೆದಿದ್ದಾನೆ.  ಗ್ರೀಸ್ನಲ್ಲಿ ನಡೆದ ರೌಂಡ್ ರಾಬಿನ್ ಟೂರ್ನಮೆಂಟ್ನಲ್ಲಿ ಎರಡನೇ ಗ್ರಾಂಡ್ಮಾಸ್ಟರ್ ಗೆದ್ದಿದ್ದಾನೆ. ಈ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ್ದಾನೆ.

English summary: Chennai boy R Praggnanandhaa on Saturday became the second youngest chess grandmaster in the world.

Leave a Reply

Your email address will not be published. Required fields are marked *

Trending

Exit mobile version