ಬಹಿರಂಗ

ದೀಪಿಕಾಳ ‘ಚಪಾಕ್’ ಸಿನೆಮಾ ಮತ್ತು ಬಿಜೆಪಿಯ ಫೇಕ್ ನ್ಯೂಸ್ ಫ್ಯಾಕ್ಟರಿಗಳು..!

Published

on

  • ಅಲ್ಮೇಡಾ ಗ್ಲಾಡ್ಸನ್

ದೀಪಿಕಾ ಪಡುಕೋಣೆ JNUಗೆ ಹೋಗಿದ್ದೇ ತಡ ಆಕೆಯ ಮುಂಬರುವ ಚಪಾಕ್ ಸಿನೆಮಾವನ್ನು ಬಾಯ್ಕಾಟ್ ಮಾಡಬೇಕೆಂದು ಹೇಗೋ ಕರೆಕೊಟ್ಟಾಯ್ತು. Kindia, Swarajya ಮುಂತಾದ ಫೇಕ್ ನ್ಯೂಸ್ ಫ್ಯಾಕ್ಟರಿಗಳು ವಾಂತಿ-ಭೇಧಿಯಿಂದ ನರಳಲಾರಂಭಿಸಿವೆ. ಇದಕ್ಕೆ ಪುರಾವೆ ಎನ್ನುವಂತೆ Swarajya ನಿನ್ನೆ ಒಂದು ಲೇಖನ ಪ್ರಕಟಿಸಿ, ಚಪಾಕ್ ಸಿನೆಮಾದಲ್ಲಿ ಆಸಿಡ್ ದಾಳಿ ಮಾಡಿದವನ ಧಾರ್ಮಿಕ ಐಡೆಂಟಿಟಿಯನ್ನು ಬದಲಾಯಿಸಲಾಗಿದೆ ಎಂದು ಎಂದಿನಂತೆ ವಿಷ ಕಕ್ಕಿತು.

ಚಪಾಕ್ ಲಕ್ಷ್ಮೀ ಅಗರ್‍ವಾಲ್ ಎನ್ನುವ ಯುವತಿಯ ಜೀವನಾಧರಿತ ಕಥೆ. ಆಕೆ ಹದಿಹರೆಯದಲ್ಲಿದ್ದಾಗ ನದೀಮ್ ಖಾನ್ ಎನ್ನುವ ವಿಕೃತನೊಬ್ಬ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದ.

ಆದರೆ Swarajyaದ ಪ್ರಕಾರ ಚಪಾಕ್ ಸಿನೆಮಾದಲ್ಲಿ ನದೀಮ್ ಖಾನ್ ಐಡೆಂಟಿಟಿಯನ್ನು ಮುಚ್ಚಿಡಲು, ಆ ಪಾತ್ರಧಾರಿಯ ಹೆಸರನ್ನು ರಾಜೇಶ್ ಶರ್ಮಾ ಎಂದಿಟ್ಟು ಆತ ಹಿಂದೂ ಧರ್ಮದವನಂತೆ ತೋರಿಸಲಾಗಿದೆ ಎಂದು ಸುಳ್ಳನ್ನು ಹರಿಯಬಿಟ್ಟಿತು.

ಇಂಥ ಫೇಕ್ ಫ್ಯಾಕ್ಟರಿಗಳು ಹೇತಿದ್ದನ್ನೇ ತಮ್ಮ ಜೀವನೋಪಾಯ ಮಾಡಿಕೊಂಡಿರುವ ಭಕ್ತ ಶ್ವಾನಗಳು ರಪಕ್ಕೆಂದು ಇದನ್ನು ನೆಕ್ಕುತ್ತಾ, ಇತರರೂ ನೆಕ್ಕುವಂತೆ ಮಾಡಿದರು. ದೀಪಿಕಾ ಹಿಂದೂ ವಿರೋಧಿ, ಮುಸ್ಲೀಮ್ ಪರ ಎನ್ನುವ ಮಟ್ಟಿಗೆ ವಿಚಾರ ಬಂದು ತಲುಪಿತು.

ಆದರೆ ಸುಳ್ಳು ಎಷ್ಟೊತ್ತು ಜೀವಿಸಲು ಸಾಧ್ಯ? ಅಸಲಿಯತ್ತೆಂದರೆ ಚಪಾಕ್ ಸಿನೆಮಾದಲ್ಲಿ ಅಸಲಿ ಜೀವನದ ಲಕ್ಷ್ಮೀ ಅಗರ್ವಾಲ್ ಪಾತ್ರ ಮಾಡುತ್ತಿರುವ ದೀಪಿಕಾಳ ಹೆಸರು ಮಾಲತಿ ಅಗರ್ವಾಲ್ ಎಂದಿದ್ದರೆ, ಅಪರಾಧಿ ಗುಡ್ಡು ಅಲಿಯಾಸ್ ನದೀಮ್ ಖಾನ್ ಪಾತ್ರಧಾರಿಯ ಹೆಸರು ಬಬ್ಬೂ ಅಲಿಯಾಸ್ ಬಷೀರ್ ಖಾನ್ ಎಂದಿದೆ. ರಾಜೇಶ್ ಶರ್ಮಾ, ಮಾಲತಿ ಅಗರ್ವಾಲರ ಫ್ರೆಂಡ್ ಪಾತ್ರದಲ್ಲಿದ್ದಾರೆ. ಅಲ್ಲಿಗೆ ಚಪಾಕ್, ಚಪಾಕ್ ಎನ್ನುತ್ತಿದ್ದ ಭಕ್ತರ ಮುಖದ ಮೇಲೆ ಮೊದಲ ತುಪುಕ್ ತುಪುಕ್ ಸಿಂಚನವಾಗಿದೆ.

ಈ ಐಟಿ ಸೆಲ್ ಎನ್ನುವುದು ಎಂಥ ಕ್ರೂರ ಹಾಗೂ ಹೇಯ ಮಾಫೀಯವೆನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಹಿಂದೆಲ್ಲಾ ಅವರು ಇಂಥ ಸುಳ್ಳುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಈವಾಗ ಆಲ್ಟ್ ನ್ಯೂಸ್, ಬೂಮ್ ಮುಂತಾದ ಸತ್ಯಶೋಧಕ ವೆಬ್‍ಸೈಟ್‍ಗಳು ಪೋಸ್ಟ್ ಕಾರ್ಡ್, Swarajya ಹಾಗೂ ಇನ್ನಿತರ ಅಸಂಖ್ಯಾತ ಫೇಕ್ ನ್ಯೂಸ್ ಫ್ಯಾಕ್ಟರಿಗಳನ್ನು ಕ್ಷಣಾರ್ಧದಲ್ಲಿ ನಂಗಾ ಮಾಡಿ ಬಿಡುತ್ತಿವೆ.

ಅಂದಹಾಗೆ ಚಪಾಕ್ ಬಗ್ಗೆ ಸುಳ್ಳು ಹರಿಯಬಿಟ್ಟ ಭಕ್ತರ ಗಮನಕ್ಕೆ. ಕೆನಡಿಯನ್ ಪ್ರಜೆ, ಭಾರತದ ಖ್ಯಾತ ಸಂದರ್ಶನಕಾರ, ಅತ್ಯುತ್ತಮ ಪತ್ರಕರ್ತ, ಮ್ಯಾಂಗೋಮ್ಯಾನ್ ಅಕ್ಷಯ್ ಕುಮಾರ್ ಅವರು ಕುವೇಯ್ಟ್-ಇರಾಕ್ ಯುದ್ದದ ಸಮಯದಲ್ಲಿ ಕುವೇಯ್ಟಿನಲ್ಲಿದ್ದ ಒಂದು ಲಕ್ಷದ ಎಪ್ಪತ್ತು ಸಾವಿರದಷ್ಟು ಭಾರತೀಯರನ್ನು airlift ಮಾಡಿದ ವಿಷಯದ ಮೇಲೆ Airlift ಅನ್ನುವ ಸಿನೆಮಾ ಮಾಡಿದ್ದರು.

ಆ ಸಿನೆಮಾ ಕುವೇಯ್ಟಿನಲ್ಲಿ ಉದ್ಯಮಿಯಾಗಿದ್ದ ಮಾದುನಿ ಮ್ಯಾಥ್ಯೂಸ್ ಅಲಿಯಾಸ್ ಟೊಯೋಟಾ ಸನ್ನಿ ಎನ್ನುವ ಭಾರತೀಯ ಮೂಲದ ವ್ಯಕ್ತಿ ಕುವೇಯ್ಟ್-ಇರಾಕ್ ಯುದ್ದದ ಸಮಯದಲ್ಲಿ ಅಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಲು, ಭಾರತೀಯ ಸರ್ಕಾರ ಹಾಗೂ ಏರ್ ಇಂಡಿಯಾ ಜೊತೆ ಮಾಡಿದ ಸಾಹಸಗಥೆ.

ಆದರೆ ಸಿನೆಮಾದಲ್ಲಿ ಮ್ಯಾಥ್ಯೂಸ್ ಪಾತ್ರಧಾರಿಯಾದ ಅಕ್ಷಯ್ ಕುಮಾರ್ ಹೆಸರು ರಂಜಿತ್ ಕಟಿಯಾಲ್ ಎಂದಿದೆ. ಭಕ್ತರು ಚಪಾಕ್ ಸಿನೆಮಾದ ಬಗ್ಗೆ ಮಾಡಿರುವ ಸುಳ್ಳು ಆರೋಪಕ್ಕೆ ಪ್ರತಿಯುತ್ತರ ಕೊಡುವುದಾದರೆ ಕೇರಳ (ದಕ್ಷಿಣ ಭಾರತ) ಮೂಲದ ಕ್ರೈಸ್ತ ಮಾದುನಿ ಮ್ಯಾಥ್ಯೂಸ್‍ನನ್ನು Airlift ಸಿನೆಮಾದಲ್ಲಿ ಪಂಜಾಬ್ ಮೂಲದ ಸಿಖ್ ರಂಜಿತ್ ಕಟಿಯಾಲ್ ಎಂದು ತೋರಿಸಿದ್ಯಾಕೆ? ಭಕ್ತರ ಧಾಟಿಯಲ್ಲೇ ಹೇಳುವುದಾದರೇ ಅಕ್ಷಯ್ ಕುಮಾರ್ ಕ್ರೈಸ್ತ ಹಾಗೂ ಮಲಯಾಳಿ (ದಕ್ಷಿಣ ಭಾರತೀಯರ) ವಿರೋಧಿ ಎನ್ನಬಹುದೇ?

ಅಂದು ಕುವೇಯ್ಟಿನಲ್ಲಿದ್ದ ಬಹುತೇಕ ಭಾರತೀಯರು ದಕ್ಷಿಣ ಭಾರತೀಯರೇ ಆಗಿದ್ದರು. ಆದರೂ ಅಕ್ಷಯ್ ಕುಮಾರ್ ಸಿನೆಮಾದಲ್ಲಿ ಮಲಯಾಳಿಗಳನ್ನು ಬಡ ಕಾರ್ಮಿಕರಂತೆ ತೋರಿಸಿ, ಹೀರೋ ಆಗಿದ್ದ ಮ್ಯಾಥ್ಯೂಸ್‍ನನ್ನು ಪಂಜಾಬಿ ರಂಜಿತ್ ಆಗಿ ಮಾಡಿದ್ಯಾಕಂತೆ? ನಿಜವಾಗಿ ನೋಡುವುದಾದರೆ Airlift ಸಿನೆಮಾಕ್ಕೆ ದಕ್ಷಿಣ ಭಾರತದ ಫ್ಲೇವರ್ ಇರಬೇಕಿತ್ತಲ್ಲವೇ? ಆದರೆ ಅದೊಂದು ಉತ್ತರ ಭಾರತೀಯರ ಸಾಹಸಗಥೆಯಂತೆ ಬಿಂಬಿಸಿದ್ದಾರೆ.

ನಮ್ಮವರೇ ಆದ ಪ್ರಕಾಶ್ ಬೆಳವಾಡಿ ಮಾಡಿರುವ ಮಲಯಾಳಿ ಜಾರ್ಜ್ ಕುಟ್ಟಿ ಪಾತ್ರವನ್ನು ನೆಗೆಟೀವ್ ಆಗಿ ತೋರಿಸಿದ್ದಾರೆ. ಇನ್ನು ನಿನಾದ್ ಕಾಮತ್ ಮಾಡಿರುವ ಇನ್ನೊಬ್ಬ ಮಲಯಾಳಿ ಪಾತ್ರ ಕುರಿಯನ್‍ನನ್ನು ಕೇವಲ ರಂಜಿತ್ ಕಟಿಯಾಲನ ಗ್ಲಾಸ್ ಫ್ರೆಂಡ್, ರಂಜಿತನ ಆಣತಿಯಂತೆ ಕೆಲಸ ಮಾಡುವವನಂತೆ ತೋರಿಸಿ ಅಕ್ಷಯ್ ಕುಮಾರ್ ದಕ್ಷಿಣ ಭಾರತೀಯರನ್ನು ಅವಮಾನಿಸಿಲ್ಲವೇ ಭಕ್ತರೇ?

ಇದು ನನ್ನ ವಾದ ಅಲ್ಲ. ನಿಮ್ಮದೇ ಆದ ಫೇಕ್ ವಾದಕ್ಕೆ ನನ್ನದೊಂದು ರಿಯಲ್ ಉತ್ತರ ಅಷ್ಟೇ. ಆದಷ್ಟೂ ಬೇಗ ಸತ್ಯವನ್ನು ಅರಗಿಸಿಕೊಳ್ಳಲು ಕಲಿಯಿರಿ. ಹಿಂದಿನ ಆರು ವರುಷಗಳ ಹನಿಮೂನ್, ಕೇಕ್‍ವಾಕ್ ಮುಗಿಯುತ್ತಾ ಬಂದಿದೆ. ರೀಲ್ ದುನಿಯಾ ಹೋಗಿ ರಿಯಲ್ ದುನಿಯಾ ಮುಂದಿದೆ.

ನಿನ್ನೆ ದೀಪಿಕಾ, ಇವತ್ತು ಅಜಯ್ ದೇವಗನ್, ಸೋನಾಕ್ಷಿ. ಅದಕ್ಕಿಂತ ಮೊದಲು ಸಿದ್ದಾರ್ಥ್ ಮಲ್ಹೋತ್ರಾ, ಆಲಿಯಾ ಭಟ್, ಪರಿಣೀತಿ ಚೋಪ್ರಾ, ಸ್ವರ ಭಾಸ್ಕರ್, ತಾಪಸಿ ಪನ್ನು, ಅನುರಾಗ್ ಕಶ್ಯಪ್ ಹೀಗೆ ಬಲು ಉದ್ದದ ಸಾಲಿದೆ.

ಫ್ಯಾಸಿಸಂ ಇನ್ನೂ ಬಲವಾಗಿ ಹೋದಂತೆ ಇನ್ನೂ ಹೆಚ್ಚಿನ ನಟ-ನಟಿಯರು ನಿಮ್ಮ ಕೈಬಿಡಲಿದ್ದಾರೆ. ಕೊನೆಗೆ ನೀವು ಕೇವಲ ಅಕ್ಷಯ್, ಪರೇಶ್ ರಾವಲ್ ಹಾಗೂ ಅನುಪಮ್ ಖೇರ್ ಸಿನೆಮಾ ಮಾತ್ರ ನೋಡಬೇಕಾದ ದಯನೀಯ ಪರಿಸ್ಥಿತಿ ಬರಬಹುದು. ಸೋ ಗೆಟ್ ವೆಲ್ ಸೂನ್.

https://www.indiatoday.in/movies/bollywood/story/chhapaak-nadeem-khan-becomes-rajesh-twitter-trolls-deepika-and-makers-for-changing-attacker-s-religion-1635039-2020-01-08

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version