ದಿನದ ಸುದ್ದಿ
ವಿಡಿಯೋ | ಯುವತಿಗೆ ಚುಡಾಯಿಸಿದ ಯುವಕರಿಗೆ ಸ್ಥಳೀಯರಿಂದ ಧರ್ಮದೇಟು
ಸುದ್ದಿದಿನ,ಚಿಕ್ಕಮಗಳೂರು : ಸಿರಿಮನೆ ಪಾಲ್ಸ್ ನೋಡಲು ಬಂದಿದ್ದ ಯುವತಿಯೊಬ್ಬಳಿಗೆ ಚುಡಾಯಿಸಿದ ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಮಂಗಳವಾರ ನಡೆದಿದೆ. ಯುವತಿಯ ಚುಡಾಯಿಸಿದ ಯುವಕರು ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ ತಾಯಿ- ಮಗಳು ಫಾಲ್ಸ್ ನೋಡಲು ಸಿರಿಮನೆಗೆ ತೆರಳಿದ್ದರು. ಈ ಸಂದರ್ಭ ಅಲ್ಲಿದ್ದ ಫಾಲ್ಸ್ ನೋಡಲು ಬಂದಿದ್ದ ಮಂಗಳೂರು ಮೂಲದ ಯುವಕರು ಅಸಭ್ಯವಾಗಿ ವರ್ತಿಸಿ ಹುಡುಗಿಯನ್ನ ಚುಡಾಯಿಸಿದ್ದಾರೆ. ಅದೂ ಅಲ್ಲದೇ ಹುಡುಗಿಯ ಮೈ ಮೇಲೆ ಕೈ ಮಾಡಿ ಶಾಲು ಎಳೆದು ಯುವತಿಯ ತಬ್ಬಿಕೊಳ್ಳಲು ಮುಂದಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243