ದಿನದ ಸುದ್ದಿ
ಕೆ.ಎಸ್. ಆರ್. ಟಿ.ಸಿ. ಬಸ್ ನಲ್ಲಿ ಹೆರಿಗೆ : ಮಾನವೀಯತೆ ಮೆರೆದ ಮಸ್ತಾನಬಿ ಮತ್ತು ಸಂಗಡಿಗರು
ಸುದ್ದಿದಿನ,ಶಹಾಪುರ : ಪಟ್ಟಣಕ್ಕೆ ತೆರಳುವ ಸಂದರ್ಭದಲ್ಲಿ ಮಾರ್ಗ ಮದ್ಯ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಶಶಿಕಲಾ ಅವರಿಗೆ, ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹೆರಿಗೆ ಮಾಡಿಸಿರುವ ಘಟನೆ ನಡೆದಿದೆ.
ವಡಗೆರಾ ತಾಲೂಕಿನ ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮಸ್ತಾನಬಿ. ಶಬಿನಾ .ಅರುಣಾ ಕುಮಾರಿ. ಪ್ರತಿಭಾ .ಲೋಚನಾ .ಇವರು ತಮ್ಮ ಇಲಾಖೆಯ ಕೆಲಸದ ನಿಮಿತ್ಯ ಯಾದಗಿರಿಯಿಂದ ಶಹಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುವಾಗ ಅದೇ ಬಸ್ ನಲ್ಲಿ ಟೋಕಾಪುರ ಗ್ರಾಮದ ಗರ್ಭಿಣಿ ಮಹಿಳೆ ಶಶಿಕಲಾ ಗಂಡ ಹೊನ್ನಪ್ಪ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದು ಬೇಡಾ ಎಂದು ಶಹಾಪುರ ಖಾಸಗಿ ಆಸ್ಪತ್ರೆಗೆ ಬರುತ್ತಿದ್ದರು ಎನ್ನಲಾಗಿದೆ.ಇವರಿಗೆ ಬಸ್ ನಲ್ಲಿದ್ದ ಪ್ರಯಾಣಿಕರು ಸಹಕರಿಸಿದ್ದು, ಬಸ್ ಅನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಹೆರಿಗೆ ಮಾಡಿಸಲು ಅನುವು ಮಾಡಿಕೊಟ್ಟಿದ್ದಾರೆ.
ಹೆಣ್ಣು ಮಗು ಜನನ
ಶಶಿಕಲಾ ಗಂಡ ಹೊನ್ನಪ್ಪ
ಮಹಿಳೆಗೆ ಹೆಣ್ಣು ಮಗು ಜನನವಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಹಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ .ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243