ಲೈಫ್ ಸ್ಟೈಲ್
ಚಿನ್ನರ ಲೋಕದಲ್ಲಿ ಮುಂಗಾರು ಮಿಂಚು
ಇನ್ನು ಮಳೆಗಾಲದ ಆನಂದವನ್ನು ಆಸ್ವಾದಿಸಲು ಮಕ್ಕಳ ಫ್ಯಾಷನ್ ಬಜಾರ್ ನಲ್ಲಿ ಚಿನ್ನರ ರಂಗುರಂಗೀನ್ ಉಡುಪುಗಳ ಖರೀದಿ ಹೆಚ್ಚಿದೆ. ಮುದ್ದು ಮಕ್ಕಳು ಏನೇ ಉಡುಪು ಧರಿಸಿದರೂ ಮುದ್ದಾಗಿ ಕಾಣುತ್ತಾರೆ.
ಮಳೆಗಾಲಕ್ಕೆ ಹೊಂದುವಂತಹ ಬೆಚ್ಚನೆಯ ಜ್ಯಾಕೆಟ್, ಲಾಂಗ್ ಕೋಟ್, ಲೆಗ್ಗಿಂಗ್, ಸಾಕ್ಸ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.ಕಾಲ ಬದಲಾದಂತೆ, ಮಕ್ಕಳ ಫ್ಯಾಷನ್ ಕೂಡಾ ಬದಲಾಗಿದೆ. ಮಕ್ಕಳಿಗೆ ಇಷ್ಟ ವಾದ ಕಾರ್ಟೂನ್ ಗಳನ್ನು ಅವರ ಉಡುಪುಗಳ ಮೇಲೆ ಮುದ್ರಿಸಲಾಗುತ್ತಿದೆ. ಇದರಿಂದ ಆಕರ್ಷಿತರಾದ ಮಕ್ಕಳು ,ಇಂತಹ ಉಡುಪುಗಳ ಬೇಡಿಕೆ ಜೋರಾಗಿದೆ. ಈಗಂತೂ ಮಕ್ಕಳ ಪಾರ್ಟಿ ಗಳಲ್ಲಿ, ಸಿಂಡ್ರೆಲ್ಲಾ, ಬಾರ್ಬಿ, ಟಿಂಕರ್ ಬೆಲ್, ಎಲ್ಸಾ..ಹೀಗೇ ಕಾರ್ಟೂನ್ ಆಧಾರಿತ ಉಡುಪುಗಳ ಬೇಡಿಕೆ ಹೆಚ್ಚಿದ್ದು , ತಮ್ಮ ಮನೆಯ ಮುದ್ದು ಬೊಂಬೆಯನ್ನ ರಾಜಕುಮಾರಿಯಂತೆ ಸಿಂಗರಿಸಿ ಕಣ್ಣು ತುಂಬಾ ನೋಡುವ ಆಸೆ ಪೋಷಕರದು. ಇದಕ್ಕೆ ತಕ್ಕಂತೆ ರೆಡಿಮೇಡ್ ಫ್ರಾಂಕ್ ಮತ್ತು ಗೌನ್ಗಳು ಬಹಳ ವಿನೂತನ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಮಕ್ಕಳು ಮತ್ತು ಪೋಷಕರನ್ನು ಸೆಳೆಯುತ್ತಿದೆ.
ಇನ್ನು ಗಂಡು ಮಕ್ಕಳ ಫೇವರಿಟ್ ಎನಿಸಿಕೊಂಡಿರುವ ಸೂಪರ್ ಹೀರೋ ಗಳ ಮಾದರಿಯಲ್ಲಿ ಉಡುಪುಗಳು, ಚೋಟಾ ಭೀಮ್, ಸೂಪರ್ ಮ್ಯಾನ್, ಡೋರೇಮಾನ್.. ಹೀಗೇ ಹಲವಾರು ವೆರೈಟಿಗಳಲ್ಲಿ ಉಡುಪುಗಳ ಖರೀದಿ ಹೆಚ್ಚಿದೆ.