ದಿನದ ಸುದ್ದಿ

ಚೀನಾ-ಭಾರತ ಸೈನಿಕರ ಘರ್ಷಣೆ, 20 ಸಾವು : ಎಟ್ರಿಕೊಟ್ಟಿದೆ ಅಮೇರಿಕಾ

Published

on

ಸುದ್ದಿದಿನ,ದೆಹಲಿ: ಲಡಾಖ್​​ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆ ನಡೆದಿದೆ. 20 ಯೋಧರು ಹುತಾತ್ಮರಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಯುಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಪ್ರತಿಕ್ರಿಯೆ ನೀಡಿದ್ದಾರೆ. 2 ದೇಶಗಳ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸದ್ಯದ ಸ್ಥಿತಿಯಲ್ಲಿ ಶಾಂತಿಯುತ ಪರಿಹಾರ ಬೆಂಬಲಿಸುತ್ತೇವೆ.

ಹುತಾತ್ಮರಾದವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ ಎಂದು ಅಮೆರಿಕ ವಕ್ತಾರ ಘಟನೆಯ ಕುರಿತು ಪ್ರತಿಕ್ರಿಯಿಸಿದೆ. ಭಾರತ-ಚೀನಾ ಗಡಿಯಲ್ಲಿ ಅಮೆರಿಕ ನಿಗಾವಹಿಸುತ್ತಿದೆ.

ಕೊರೊನಾ ಸಂಕಷ್ಟದ ನಡುವೆಯೇ ಯದ್ಧ ಭೀತಿ ಶುರುವಾಗಿದೆ. ಇಬ್ಬರ ಮಧ್ಯೆ ಸಂಘರ್ಷ ನಡೆದ ಹಿನ್ನೆಲೆಯಲ್ಲಿ ಭಾರತ-ಚೀನಾ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಂಘರ್ಷದ ನಡುವೆ ದೊಡ್ಡಣ್ಣ ಅಮೆರಿಕ ಎಂಟ್ರಿಯಾಗಿದ್ದು, ಪರಿಸ್ಥಿತಿ ಅವಲೋಕನ ನಡೆಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version