ದಿನದ ಸುದ್ದಿ

ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದು ಡ್ರಗ್ಸ್ ಸೇವನೆಯಿಂದಾನ..!? : ಸರ್ಜಾ ಪ್ಯಾಮಿಲಿ ಆಪ್ತ ಸಂಬರಗಿ ಹೇಳಿದ್ದೇನು..?

Published

on

ಸುದ್ದಿದಿನ, ಬೆಂಗಳೂರು:ಸ್ಯಾಂಡಲ್ ವುಡ್ ನಟ-ನಟಿಯರು ಡ್ರಗ್‌ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಪೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಖಾಸಗಿವಾಹಿನಿಯೊಂದರಲ್ಲಿ ಡ್ರಗ್ಸ್ ಮಾಫಿಯ ಬಗ್ಗೆ ಮಾತನಾಡಿದ ಅವರು ಕೆಲವು ಹೊಸ ನಟ-ನಟಿಯರು ವೀಕೆಂಡ್ ರೇವ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದು, ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ನನಗೆ ರಕ್ಷಣೆಕೊಡುವುದಾದರೆ ಯಾರೆಲ್ಲ ಡ್ರಗ್ ಗೆ ಅಡಿಕ್ಟ್ ಆಗಿದ್ದಾರೆ ಎಂಬ ವಿವರಗಳನ್ನು ಕೊಡುತ್ತೇನೆ ಎಂದಿದ್ದರೆ.

ಹಾಗೆ ಇತ್ತೀಚೆಗೆ ಯುವ ನಟ ರೊಬ್ಬರು ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಅವರ ಪೋಸ್ಟ್ ಮಾರ್ಟಮ್ ಯಾಕೆ ಮಾಡಿಸಲಿಲ್ಲ ಎಂಬ ಅನುಮಾನ ವ್ಯಕ್ತಪಡಿಸುತ್ತಾ,ಅವರು ಡ್ರಗ್ ತೆಗೆದುಕೊಳ್ಳುತ್ತಿದ್ದರಾ..? ಎಂಬ ಮಾಹಿತಿ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಜಾ ಪ್ಯಾಮಿಲಿಯ ಆಪ್ತ,ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಇಂದ್ರಜಿತ್ ಲಂಕೇಶ್ ಅನುಮಾನಕ್ಕೆ ಸ್ಪಷ್ಟನೆ ನೀಡಿದ್ದಾರೆ‌. ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮರಣಹೊಂದಿದ್ದು, ಕಾರಣಾಂತರಗಳಿಂದ ಅವರ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿಸಲಾಗಲಿಲ್ಲ ಎಂದು ಇಂದ್ರಜಿತ್ ಅನುಮಾನಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version