ದಿನದ ಸುದ್ದಿ
ದುರ್ಗದಲ್ಲಿ ನಡೆಯಲಿದೆ ಬಂಡಾಯ ಸಾಹಿತ್ಯ ಸಂವಾದ
ಚಿತ್ರದುರ್ಗ, (ಅ.7) : ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಅ.13 ಮತ್ತು 14 ರಂದು ಎರಡು ದಿನಗಳ ಕಾಲ ಚಿತ್ರದುರ್ಗದಲ್ಲಿ ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ ಪರಿಕಲ್ಪನಾತ್ಮಕ ಚಿಂತನೆ ಕುರಿತು ಸಾಹಿತ್ಯ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಜಿ.ಹಳ್ಳಿ ನಾಗರಾಜ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಲವತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಹುಟ್ಟಿಕೊಂಡ ಬಂಡಾಯ ಸಾಹಿತ್ಯ ರಾಜ್ಯದಲ್ಲಿ ಪುಸ್ತಕ ಓದುವ ಪರಿಪಾಠ ಬೆಳೆಸಿತು. ಅನೇಕ ಪ್ರಶ್ನೆಗಳನ್ನು ಜನರ ಮುಂದಿಟ್ಟಿದೆ. ಇಂತಹ ಸಾಹಿತ್ಯದಲ್ಲಿ ಅನೇಕ ಉತ್ತಮ ಕೃತಿಗಳು ರಚನೆಯಾಗಿವೆ. ಬಂಡಾಯ ಸಾಹಿತ್ಯವನ್ನು ಯುವ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಾದೇಶಿಕ ಭಾಷೆಗಳು, ನಿರ್ಧಿಷ್ಟ ವಿಷಯಗಳ ಕುರಿತು ಸಂವಾದ ನಡೆಸಲಾಗುವುದು ಎಂದರು.
ಅ.13 ರಂದು ಬೆಳಿಗ್ಗೆ 10 ಗಂಟೆಗೆ ನಗರದ ತರಾಸು ರಂಗಮಂದಿರದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸುವರು. ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಬಾನು ಮುಷ್ತಾಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಿರೇಹಳ್ಳಿ ಮಲ್ಲಿಕಾರ್ಜುನ, ಕೆ.ಎಂ.ವೀರೇಶ್, ಸತೀಶ್‍ರೆಡ್ಡಿ, ವಿ.ಗುರುಮಲ್ಲಪ್ಪ ತುರುವನೂರು, ಕೆ.ಜಿ. ಜಗದೀಶ್ ಉಪಸ್ಥಿತರಿರುವರು. ಬೆಳಿಗ್ಗೆ 11.30ಕ್ಕೆ ಮೊದಲ ಗೋಷ್ಠಿ ನಡೆಯುವುದು. ಅದರಲ್ಲಿ ರಾಜಪ್ಪ ದಳವಾಯಿ ‘ಕನ್ನ ಸಾಹಿತ್ಯ’, ರಂಗನಾಥ ಆರನಕಟ್ಟೆ ‘ತಮಿಳು ಸಾಹಿತ್ಯ’ ಹಾಗೂ ನಗರಗೆರೆ ರಮೇಶ್ ‘ತೆಲುಗು ಸಾಹಿತ್ಯ’ ಕುರಿತು ಮಾತನಾಡುವರು. ಸಿದ್ದನಗೌಡ ಪಾಟೀಲ್ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2.15 ಕ್ಕೆ ಎರಡನೇ ಗೋಷ್ಠಿ. ಮೋಹನ್ ಕುಂಟಾರ ‘ಮಲೆಯಾಳಿ ಸಾಹಿತ್ಯ’, ಬಿ.ಎಸ್.ಸುಮಿತ್ರಾಬಾಯಿ ‘ಸಂಸ್ಕೃತ ಸಾಹಿತ್ಯ’ ಹಾಗೂ ಗೀತಾ ಶಣೈ ‘ಕೊಂಕಣ ಸಾಹಿತ್ಯ’ ಕುರಿತು ಮಾತನಾಡುವರು. ಕೇಶವ ಶರ್ಮ ಅಧ್ಯಕ್ಷತೆ ವಹಿಸುವರು. ಸಂಜೆ 4.30ಕ್ಕೆ ಮೂರನೇ ಗೋಷ್ಠಿ. ಶಿವರಾಮ ಶೆಟ್ಟಿ ‘ತುಳು ಸಾಹಿತ್ಯ’, ಬಿ.ಎಂ.ಹನೀಫ್ ‘ಬ್ಯಾರಿ ಸಾಹಿತ್ಯ’ ಹಾಗೂ ವಿಜಯ್ ತಮ್ಮಂಡ ಪೂಣಚ್ಚ ‘ಕೊಡವ ಸಾಹಿತ್ಯ’ ಕುರಿತು ಮಾತನಾಡುವರು. ಬೋಳುವಾರು ಮಹಮದ್ ಕುಂಞ ಅಧ್ಯಕ್ಷತೆ ವಹಿಸುವರು.
ಅ.14 ರಂದು ಬೆಳಿಗ್ಗೆ 9.30ಕ್ಕೆ ನಾಲ್ಕನೇ ಗೋಷ್ಠಿ ನಡೆಯಲಿದೆ. ತಾರಣ ಶುಭದಾಯಿನಿ ‘ಬಂಗಾಳಿ ಸಾಹಿತ್ಯ’, ಕಾಶೀನಾಥ ಅಂಬಲಗಿ ‘ಹಿಂದಿ ಸಾಹಿತ್ಯ’ ಹಾಗೂ ಎಂ.ಜಿ.ಹೆಗಡೆ ‘ಗುಜರಾತಿ ಸಾಹಿತ್ಯ’ ಕುರಿತು ಮಾತನಾಡುವರು. ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 11.30ಕ್ಕೆ ಐದನೇ ಗೋಷ್ಠಿ. ಮೆಹರ್ ಮನ್ಸೂರ್ ‘ಉರ್ದು ಸಾಹಿತ್ಯ’, ಭಾಗೀರತಿ ಬಾಯಿ ‘ಅಸ್ಸಾಮಿ ಸಾಹಿತ್ಯ’ ಹಾಗೂ ಚಂದ್ರಕಾಂತ ಪೋಕಳೆ ‘ಮರಾಠಿ ಸಾಹಿತ್ಯ’ ಕುರಿತು ಮಾತನಾಡುವರು. ಸುಕನ್ಯಾ ಮಾರುತಿ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2.15ಕ್ಕೆ ಆರನೇ ಗೋಷ್ಠಿ. ಶ್ರೀಪಾದ ಭಟ್ ‘ಪಂಚಾಇ ಸಾಹಿತ್ಯ’, ಅರುಣ್ ಜೋಳದ ಕೂಡ್ಲಿಗಿ ‘ಕಾಶ್ಮೀರಿ ಸಾಹಿತ್ಯ’ ಹಾಗೂ ಶಾಂತಾನಾಯ್ಕ್ ಶೀರಗಾನಹಳ್ಳಿ ‘ಲಂಬಾಣ ಸಾಹಿತ್ಯ’ ಕುರಿತು ಮಾತನಾಡುವರು. ಸಿ.ಬಸವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಸಂಜೆ 4.30ಕ್ಕೆ ಕವಿಗೋಷ್ಠಿ. ಚಂದ್ರಶೇಖರ್ ತಾಳ್ಯ ಆಶಯ ನುಡಿಗಳನ್ನಾಡುವರು. ಬಿ.ಟಿ.ಲಲಿತಾ ನಾಯಕ್ ಅಧ್ಯಕ್ಷತೆ ವಹಿಸುವರು. ಡಾ.ಲೋಕೇಶ್ ಅಗಸನಕಟ್ಟೆ ಉಪಸ್ಥಿತರಿರುವರು. ನಾಡಿನ ವಿವಿಧ ಕವಿಗಳು ಭಾಗವಹಿಸುವರು.
ಸಂಜೆ 6.30ಕ್ಕೆ ಸಮಾರೋಫ ಸಮಾರಂಭ. ಎಲ್.ಹನುಮಂತಯ್ಯ ಸಮಾರೋಪ ಭಾಷಣ ಮಾಡುವರು. ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸುವರು. ಕಾಳೇಗೌಡ ನಾಗವಾರ, ಡಾ.ಬಿ.ಎಲ್.ವೇಣು ಆರ್.ಮಲ್ಲಿಕಾರ್ಜುನಯ್ಯ, ದಾವಣಗೆರೆ ಗಂಗಾಧರ ಉಪಸ್ಥಿತರಿರುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಜೆ.ಕರಿಯಪ್ಪ ಮಾಳಿಗೆ, ಕೆ.ಎಂ.ವೀರೇಶ್, ಶಿವಲಿಂಗಪ್ಪ, ಮಲ್ಲಿಕಾರ್ಜುನ ಕಡಕೋಳ್, ರಾಮಚಂದ್ರಪ್ಪ, ಗೋಪಾಲಸ್ವಾಮಿ ನಾಯಕ ಉಪಸ್ಥಿತರಿದ್ದರು.