ದಿನದ ಸುದ್ದಿ

ಚಿತ್ರದುರ್ಗದ ಹಿಂದೂ ಮಹಾ ಗಣಪತಿ ವಿಶೇಷ ಏನು ಗೊತ್ತಾ ?

Published

on

ಸುದ್ದಿದಿನ ಡೆಸ್ಕ್ : ಪ್ರತಿ ಬಾರಿ ನಾಡಿನ ಗಮನ ಸೆಳೆಯುವ ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಈ ಬಾರಿ ‘ರಾಜ ಗಾಂಭೀರ್ಯ’ ದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ !

ಹೌದು, ಈ ಬಾರಿ ಚಿತ್ರದುರ್ಗದ ಹಿಂದೂ ಮಹಾ ಗಣಪತಿಯನ್ನು ರಾಜ ಗಾಂಭೀರ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಬಾರಿ ಕೂಡ ಹಿಂದೂ ಮಹಾ ಗಣಪತಿಯನ್ನು ಮಹಾರಾಷ್ಟ್ರದ ಸಾಂಗ್ಲಿ ಯಲ್ಲಿ ನಿರ್ಮಿಸಲಾಗಿದ್ದು, ಬುಧವಾರ ಚಿತ್ರದುರ್ಗ ಕ್ಕೆ ತರಲಾಗಿದೆ. ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ಚಿತ್ರದುರ್ಗದ ಸ್ಟೇಡಿಯಂ ರಸ್ತೆಗೆ ತರಲಾಗಿದ್ದು, ಮೆರವಣಿಗೆಗೆ ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಚಾಲನೆ ನೀಡಿದ್ದಾರೆ. ಗುರುವಾರ ಗಣಪತಿ ಪ್ರತಿಷ್ಠಾನೆ ಮಾಡಲಾಯಿತು.

ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನ !

ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಗಮನ ಸೆಳೆದಿದ್ದು, ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನ ಗಣಪತಿ ವಿಸರ್ಜನೆಗೆ ಆಗಮಿಸಿವುದು ವಿಶೇಷ.

ಸೆ.29ಕ್ಕೆ ಶೋಭಾಯಾತ್ರೆ

ಇದೇ ಸೆಪ್ಟೆಂಬರ್ 29ರಂದು ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ನಡೆಯಲಿದ್ದು, ಅದ್ದೂರಿ ಮೆರವಣಿಗೆಗೆ ಗಣಪತಿ ಪ್ರತಿಷ್ಠಾನೆ ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಅಂದು ಬೆಳಗ್ಗೆ 10ಕ್ಕೆ ಆರಂಭವಾಗುವ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ರಾತ್ರಿ 8 ವರೆಗೆ ನಡೆಯುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಜನ ಆಗಮಿಸುತ್ತಾರೆ.

Leave a Reply

Your email address will not be published. Required fields are marked *

Trending

Exit mobile version