ರಾಜಕೀಯ
ಸಮುದಾಯ ಮರೆತ ಆಂಜನೇಯ ವಿರುದ್ಧ ಮಾದಿಗರ ಆಕ್ರೋಶ
ಸುದ್ದಿದಿನ, ಚಿತ್ರದುರ್ಗ (ಅ. 08) : ಲೋಕಸಭಾ ಚುನಾವಣೆ ಆರಂಭದಲ್ಲೇ ಮಾಜಿ ಸಚಿವ ಎಚ್.ಆಂಜನೇಯ ಅವರ ವಿರುದ್ಧ ಮಾದಿಗ ಸಮುದಾಯದ ಆಕ್ರೋಶ ವ್ಯಕ್ತಪಡಿಸಿದೆ.
ಮಾಜಿ ಸಚಿವ ಎಚ್. ಆಂಜನೇಯ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡದೆ ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ, ಇದೇ ರೀತಿ ಮುಂದುವರೆದರೆ ಅವರ ವಿರುದ್ದ ಹೋರಾಟವನ್ನು ಮಾಡುವುದ್ದಲ್ಲದೆ ತಕ್ಕ ಪಾಠವನ್ನು ಕಲಿಸುವುದಾಗಿ ರಾಜ್ಯ ಮಾದಿಗ ಮಹಾ ಸಭಾ ಎಚ್ಚರಿಸಿದೆ.
ಚಿತ್ರದುರ್ಗ ನಗರದಲ್ಲಿ ಸೋಮವಾರ ಸಭೆಯನ್ನು ನಡೆಸಿದ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದರ್ಗಾ ಅಂಜನೇಯ ಸಮಾಜದ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡಿ ಅಧಿಕಾರವನ್ನು ಪಡೆದು ಅದನ್ನು ಅನುಭವಿಸಿದರು ಆದರೆ ಸಮಾಜಕ್ಕೆ ಯಾವುದೇ ರೀತಿಯ ಉಪಯುಕ್ತವಾದ ಕಾರ್ಯಕ್ರಮಗಳಾಗಲಿ, ಯೋಜನೆಗಳಾಗಲಿ ಹಾಕಿಕೊಳ್ಳಲಿಲ್ಲ, ಇದರ ಬದಲಾಗಿ ಸಮಾಜದ ಆಸ್ತಿಗಳನ್ನು ಪಡೆಯುವ ಸಲುವಾಗಿ ಟ್ರಸ್ಟ್ರ್‍ಗಳನ್ನು ರಚನೆ ಮಾಡುವುದರ ಮೂಲಕ ಅದರಲ್ಲಿ ತಮಗೆ ಬೇಕಾದವರನ್ನು ಹಾಕಿಕೊಂಡು ಸರ್ಕಾರದಿಂದ ಅನುದಾನವನ್ನು ಪಡೆದು ಸ್ವಂತವಾಗಿ ಅಸ್ತಿಯನ್ನು ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸಮಾಜದ ಆಸ್ತಿ ಬೇರೆಯರ ಕೈಯಲ್ಲಿದೆ ಆದನ್ನು ಬಿಡಿಸಲಾಗಿದೆ ಹಾಗೇಯೇ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಮಾದಿಗರಿಗೆ ಅನುಕೂಲವಾಗುವ ಸದಾಶಿವ ಆಯೋಗದ ವರದಿ ಜಾರಿಗಾಗಿ ಹಲವಾರು ಹೋರಾಟಗಳು, ಪ್ರತಿಭಟನೆಗಳು, ಧರಣ ಗಳು ನಡೆದಿದ್ದರು ಸಹಾ ಇದರ ಬಗ್ಗೆ ಅಧಿಕಾರದಲ್ಲಿದ್ಧಾಗ ಮಾತನಾಡದೇ ಜನಾಂಗದವರಿಗೆ ಮೋಸವನ್ನು ಮಾಡುತ್ತಾ ಇದ್ದ ಅಂಜನೇಯ ಈಗ ಮಾತ್ರ ಸದಾಶಿವ ಆಯೋಗದ ವರದಿ ಜಾರಿಯಾಗಬೇಕೆಂದು ಹೋರಾಟವನ್ನು ಮಾಡುತ್ತಿದ್ದಾರೆ ಇದೇ ಹೋರಾಟವನ್ನು ಅಂದು ಅಧಿಕಾರ ಇದ್ದಾಗ ಮಾಡಿದ್ದರೆ ಬೆಲೆ ಸಿಗುತ್ತಿತ್ತು ಈಗ ಸೋತಿದ್ದೇನೆ ಏನು ಕೆಲಸ ಇಲ್ಲ ಎಂದು ಸದಾಶಿವ ಆಯೋಗದ ವರದಿ ಅನುಷ್ಠಾನದ ಬಗ್ಗೆ ಮಾತನಾಡುತ್ತಿದ್ಧಾರೆ ಮಾಡುವ ಇಚ್ಚಾ ಶಕ್ತಿ ಇದ್ದರೆ ಅಧಿಕಾರದಲ್ಲಿದ್ದಾಗಲೆ ಮಾಡಬೇಕಿತ್ತು ಎಂದು ಹನುಮಂತಪ್ಪ ಟೀಕಿಸಿದ್ದಾರೆ.
ಈಗಾಗಲೇ ಜನಾಂಗದ ಮಠ ಇದ್ದರೂ ಸಹಾ ಬೇರೆಯವರ ಜೊತೆಗೂಡಿ ಮತ್ತೊಂದು ಮಠವನ್ನು ಮಾಡುವುದರೊಂದಿಗೆ ಜನಾಂಗದವರಲ್ಲಿ ಗೊಂದಲವನ್ನು ಮೂಡಿಸುವಂತೆ ಮಾಡಿದ್ದಾರೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಜನಾಂಗ, ಸಮಾಜ ಮತ್ತು ಮಠಗಳನ್ನು ಅಂಜನೇಯ ಬಳಸಿಕೊಳ್ಳುತ್ತಿದ್ದಾರೆ, ಇದರ ಬಗ್ಗೆ ಸಮುದಾಯವರು ಎಚ್ಚರದಿಂದ ಇರುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿ, ಸರ್ಕಾರದ ಅನುದಾನವನ್ನು ಸಮಾಜದ ಅಭೀವೃದ್ದಿಗೆ ಬಳಕೆ ಮಾಡದೇ ಸ್ವಂತಕ್ಕೆ ಯಾವುದೇ ಹೆಸರಿಲ್ಲದ ಟ್ರಸ್ಟ್‍ಗೆ ಹಾಕುವುದರ ಮೂಲಕ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.
ಸಭಾದ ರಾಜ್ಯ ಸಂಚಾಲಕರಾದ ಪಾಂಡುರಂಗಪ್ಪ ಮಾತನಾಡಿ ಅಂಜನೇಯ ತಾವೊಬ್ಬರೆ ಹೋದರೆ ಜನಾಂಗದವರು ಮಾತು ಕೇಳುವುದಿಲ್ಲ ಎಂದು ಮನಗಂಡು ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಮತ್ತು ತಿಮ್ಮಾಪುರರವರನ್ನು ಮುಂದಿಟ್ಟುಕೊಂಡು ಸಭೆಯನ್ನು ಮಾಡುವುದರ ಮೂಲಕ ಜನಾಂಗವನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದಾರೆ ಎಂದರು.
ಸರ್ಕಾರ ಮಾದಿಗ ಅಭೀವೃದ್ದಿಗಾಗಿ ನಿಗಮವನ್ನು ಸ್ಥಾಪನೆ ಮಾಡಲು ಮುಂದಾಗಿತ್ತು ಅದರ ಹೆಸರನ್ನು ಆದಿಜಾಂಬವ ಅಭೀವೃದ್ದಿ ನಿಗಮ ಎಂದು ನಾಮಕರಣಕ್ಕೆ ಮುಂದಾಗಿದೆ ಆದರೆ ಮಹಾಸಭಾ ಇದನ್ನು ವಿರೋಧಿಸುತ್ತದೆ ಈ ರೀತಿಯ ಹೆಸರಿನಿಂದ ನಿಗಮವನ್ನು ಸ್ಥಾಪನೆ ಮಾಡುವುದು ಬೇಡ ಇದರ ಬದಲಾಗಿ ಮಾದಿಗ ನಿಗಮ ಎಂದು ಸ್ಥಾಪನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಮಾದಿನ ಜನಾಂಗದ ಶಿವಮೂರ್ತಿ, ರಾಜಪ್ಪ, ಗಂಗಾಧರಪ್ಪ, ವಾಗೀಶ್ ಕುಮಾರ್ ರುದ್ರಮುನಿ, ಬಸವರಾಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.