/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಚಿತ್ರದುರ್ಗ ನಗರಸಭೆಗೆ ಇಂದು ಚುನಾವಣೆ: ಅಭ್ಯರ್ಥಿಗಳಲ್ಲಿ ತಳಮಳ

Published

on

ಸುದ್ದಿದಿನ, ಚಿತ್ರದುರ್ಗ: ನಗರಸಭೆ ಚುನಾವಣೆಗೆ ಆ.31ರಂದು ಶುಕ್ರವಾರ ಮತದಾನ ಭರದಿಂದ ಸಾಗಿದ್ದು, ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದೆ.

ಇಷ್ಟು ದಿನ ಮತಪ್ರಚಾರ ಮಾಡಿ ಮತದಾರರ ಮನವೊಲಿಸುವ ಯತ್ನ ಮಾಡಿದ್ದ ಅಭ್ಯರ್ಥಿಗಳು ಇಂದು ಅದೃಷ್ಟ ಪರೀಕ್ಷೆಯ ತಳಮಳದಲ್ಲಿದ್ದಾರೆ. ಪ್ರತಿ ಅಭ್ಯರ್ಥಿಗಳ ಮನೆಗಳ ಮುಂದೆ ಕಾರ್ಯಕರ್ತರು ಬಿಜಿಯಿಂದ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಚುನಾವಣೆ ಅಧಿಕಾರಿಗಳ ಯಂತ್ರಗಳ ಮಾಸ್ಟರಿಂಗ್ ಕೆಲಸ ಮುಗಿಸಿ ಈಗ ಮತದಾನ ಪ್ರಕ್ರಿಯೆ ಆರಂಭಿಸಿದ್ದಾರೆ.

ಮೂರು ಪಕ್ಷಗಳ ನಡುವೆ ಜಿದ್ದಾಜಿದ್ದಿ

ಕೋಟೆನಾಡು ಚಿತ್ರದುರ್ಗ ನಗರಸಭೆ ಗದ್ದುಗೆ ಹಿಡಿಯಲು ಮೂರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಜಿದ್ದಾಜಿದ್ದಿನ ಹೋರಾಟ ನಡೆಸಿವೆ. ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ನಾಯಕರ ಮನೆಗಳಿಗೆ ಯಡತಾಕಿ ಚುನಾವಣೆ ಗೆಲ್ಲುವ ಉತ್ಸಾಹ ತೋರಿದ್ದರು.

ಈವರೆಗೆ ನಗರಸಭೆಯಲ್ಲಿ ಒಂದೇ ಬಂದು ಖಾತೆ ತೆರೆಯದ ಕಮಲ ಈ ಬಾರಿ ಗದ್ದುಗೆ ಹಿಡಿದೇ ಇರುವೆನು ಎಂಬ ಭರದಿಂದ ಚುನಾವಣೆಗೆ ಧುಮಿಕಿದೆ. ಸದ್ಯ ಅಭ್ಯರ್ಥಿಗಳ ಬಲಾಬಳ ನೋಡಿದರೆ ಬಿಜೆಪಿ ಈ ಬಾರಿ ತನ್ನ ಪಾರುಪಥ್ಯ ಸಾಧಿಸುವ ಲಕ್ಷಗಳು ಗೋಚರಿಸುತ್ತಿವೆ.

ಶಾಸಕ ತಿಪ್ಪಾರೆಡ್ಡಿಗೆ ಪ್ರತಿಷ್ಠೆ

ವಿಧಾನಸಭೆಯಲ್ಲಿ ಕಾಂಗ್ರೆಸ್ ಮಣಿಸಿ ಬಹುಮತದಿಂದ ಜಯಗಳಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿಗೆ ನಗರಸಭೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದಕ್ಕಾಗಿ ಸೂಕ್ತ ಹುರಿಯಾಳುಗಳನ್ನು ಚನಾವಣೆ ಕಣದಲ್ಲಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಇನ್ನು ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ನ ನಾಯಕರು ಚುನಾವಣೆಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಆದರೆ ಅಭ್ಯರ್ಥಿಗಳಲ್ಲಿ ಮಾತ್ರ ಉತ್ಸಾಹ ಹೆಚ್ಚಿದೆ.

ಮಾತಿನ ಚಕಮಕಿ

ಚಿತ್ರದುರ್ಗ 22ನೇ ವಾರ್ಡ್‍ನಲ್ಲಿ ಬೇರೆವರನ್ನು ಕರೆದುಕೊಂಡು ಬಂದು ಮತದಾನ ಮಾಡಲಾಗಿಸುತ್ತದೆ ಎಂದು ಆರೋಪಿಸಿ ಅಭ್ಯರ್ಥಿಗಳ ನಡುವೆ ಮಾತನಿ ಚಕಮಕಿ ನಡೆದಿದೆ. ನಗರದ ಹಳೇ ಹೈಸ್ಕೂಲ್ ಮೈದಾನದ ಮತಗಟ್ಟೆಯಲ್ಲಿ ತಾಂತ್ರಿಕ ದೋಷದಿಂದ ಮತದಾನ ವಿಳಂಬವಾಗಿದೆ.

Leave a Reply

Your email address will not be published. Required fields are marked *

Trending

Exit mobile version