ದಿನದ ಸುದ್ದಿ

ಚಿತ್ರದುರ್ಗ | ‘ಸೌಹಾರ್ದ ನಡಿಗೆ ಶರಣ ಸಂಸ್ಕೃತಿ ಕಡೆಗೆ’ ಕಾರ್ಯಕ್ರಮ

Published

on

ಸುದ್ದಿದಿನ, ಚಿತ್ರದುರ್ಗ : ಶ್ರೀ ಮುರುಘಾಮಠದಲ್ಲಿರುವ ನಡೆಯುತ್ತಿರುವ ಶರಣ ಸಂಸ್ಕøತಿಯ ಉತ್ಸವ 2018ರ ಪ್ರಯುಕ್ತ “ಸೌಹಾರ್ದ ನಡಿಗೆ ಶರಣ ಸಂಸ್ಕøತಿ ಕಡೆಗೆ” ಕಾರ್ಯಕ್ರಮದೊಂದಿಗೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು.

ಈ ಜಾಥಾವು ನಗರದ ಕನಕ ವೃತ್ರದಿಂದ, ಕೋಟೆಯ ಮುಂಬಾಗ, ಜೋಗಿಮಟ್ಟಿ ರಸ್ತೆ, ಪಟ್ಟದ ಪರಮೇಶ್ವರಿ ಶಾಲೆ, ಚಳ್ಳಕೆರೆ ಗೇಟ್, ಆರ್.ಟಿ.ಒ ಕಚೇರಿ ಹತ್ತಿರ, ರಾಷ್ಟ್ರೀಯ ಹೆದ್ದಾರಿ 13ರ ಗ್ರಾಮಾಂತರ ಪೋಲಿಸ್‍ಠಾಣೆ, ರೈಲ್ವೆಸ್ಟೇಷನ್, ಎಸ್.ಜೆ.ಎಮ್.ವಿದ್ಯಾರ್ಥಿ ನಿಲಯದ ಬಳಿ ಸಾಗಿತು. ನಗರದ ಪ್ರಮುಖರು, ರಾಜಕೀಯ ದುರೀಣರು, ಎಸ್.ಜೆ.ಎಮ್.ವಿದ್ಯಾಪೀಠದ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ನಾಗರೀಕರು ತಂಡೋಪತಂಡವಾಗಿ ವಿವಿಧೆಡೆಯಿಂದ ಆಗಮಿಸಿ ಚಿತ್ರದುರ್ಗದ ಗಾಂಧೀ ವೃತ್ತದಲ್ಲಿ ಸಮಾವೇಶಗೊಂಡು ಶ್ರೀ ಮಠದ ಅನುಭವ ಮಂಟಪಕ್ಕೆ ಬಂದು ಸಂಪನ್ನವಾಯಿತು.

ಪರಿವರ್ತನೆ ಜಗದ ನಿಯಮ, ಪರಿವರ್ತನೆಯಾಗದಿದ್ದಲ್ಲಿ ಕಾಲವೇ ಪರಿವರ್ತಿಸುತ್ತದೆ. ಮರುಕವಿಲ್ಲದ ಮಾನವನನಿಗಿಂತ ಮರದ ನೆರಳೆ ವಾಸಿ. ಸ್ವಪ್ರಯತ್ನದಿಂದ ಸಾಮಾನ್ಯನೂ ಸಮರ್ಥನಾಗಬಲ್ಲ. ಆಸಕ್ತಿಯಿಂದ ಜೀವನ ಅನಾವರಣ ನಿರಾಸಕ್ತಿಯಿಂದ ಜೀವನ್ಮರಣ. ಅಂತರಂಗದ ಶುದ್ದತೆ ಬಹಿರಂಗದಲ್ಲಿ ಸಾತ್ವಿಕತೆ ಸಾಧಿಸುವುದೇ ಬದುಕಿನ ಬದ್ದತೆ ಎನ್ನುವಂತಹ ಘೋಷವಾಕ್ಯಗಳನ್ನು ಕೂಗುತ್ತ ಜಾತವು ಸಾಗಿತು.

ನಂತರ ಅನುಭವಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದಡಾ.ಶಿವಮೂರ್ತಿಮುರುಘಾಶರಣರು, ಸರ್ವಜನಾಂಗದ ಶಾಂತಿಯ ತೋಟ ಎಂಬುವ ರೀತಿಯಲ್ಲಿ ಶ್ರೀಮಠವು ನಡೆಯುತ್ತ ಸಾಗಿದೆ. ಇಂದು ಚಿತ್ರರಂಗದ ಕಲಾವಿದರು ಆಗಮಿಸಿ ನಮ್ಮ ಸೌಹಾರ್ಧ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಶರಣ ಸಂಸ್ಕøತಿ ಉತ್ಸವಕ್ಕೆ ಮೆರಗು ತಂದಿದೆ ಎಂದು ನುಡಿದರು.

ಚಿತ್ರನಟ ಹಾಗು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮಾತನಾಡಿ ಇಂತಹ ಒಂದು ಅನುಭವ ವಿಶೇಷವಾದದ್ದು . ದಸರ ಉತ್ಸವವನ್ನು ಇಡೀ ನಾಡೆನೆಲ್ಲೆಡೆ ಆಚರಿಸುತ್ತಾರೆ. ಚಿತ್ರರಂಗದವರಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.. ಜಾತಿ ಮತ ಯಾವುದನ್ನು ನೋಡದೆ ನಾವೆಲ್ಲರು ಒಂದೇ ಎಂದು ಸಾರುವ ಮಠ ಶ್ರೀಮಠವು ಆಗಿದೆ. ಚಿತ್ರರಂಗದಲ್ಲಿ ನಾವೆಲ್ಲರೂ ಒಂದೊಂದು ಪಾತ್ರ ಮಾಡುತ್ತ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡುತ್ತೇವೆ. ಹಲವು ವಿಧವಾದ ಅನುಭವಗಳಾಗಿವೆ. ಇಂದು ಮುರುಘಾಶರಣರ ಪಾದದಲ್ಲಿರುವುದು ನನ್ನ ಅದೃಷ್ಟವಾಗಿದೆ. ಈ ಸಂಧರ್ಭವನ್ನು ನನ್ನ ಜೀವನದಲ್ಲಿ ಎಂದು ಮರೆಯುವುದಿಲ್ಲ ಎಂದು ತಿಳಿಸಿದರು.

ಹಿರಿಯ ಚಿತ್ರನಟ ದೊಡ್ಡಣ್ಣ ಮಾತನಾಡಿ, ಜನಿಸಿದ ಸಕಲ ಜೀವರಾಶಿಗಳಿಗೆ ಆಹಾರವೇ ಮುಖ್ಯ, ಜಗತ್ತಿನಲ್ಲಿ ಅನ್ನ ದೊಡ್ಡದು. ಜಗತ್ತಿನಲ್ಲಿ ತಾಯಿ ಸತ್ತರೆ ಬದುಕುವರು, ಆದರ ಅನ್ನವಿಲ್ಲದೇ ಯಾವ ಜೀವರಾಶಿಯು ಬದುಕುವುದಿಲ್ಲ. ಶರಣರು ಅನ್ನದಾಸೋಹವನ್ನು ಶ್ರೀಮಠದಲ್ಲಿ ಉಚಿತವಾಗಿ ನೀಡುವಂತಹ ಕಾರ್ಯವನ್ನು ಮಾಡುತ್ತಿರುತ್ತಾರೆ, ಅದು ನಮ್ಮೆಲ್ಲರ ಪುಣ್ಯ ಹಾಗು ಭಾಗ್ಯವೆನ್ನಬೇಕು ಎಂದು ನುಡಿದರು.

ಸಾಹಿತಿ ಬಿ.ಎಲ್.ವೇಣು ಮಾತನಾಡಿ, ನಾನು ನಿಮ್ಮೂರಿನ ಮಗ, ನನ್ನ ಬೆಳವಣ ಗೆಯಲ್ಲಿ ಈ ಮಠದ ಪಾತ್ರ ಮಹತ್ವದ್ದಾಗಿದೆ. ಆದಿಕವಿ ಪಂಪ ಹೇಳಿರುವಂತೆ ಮಾನವ ಜಾತಿ ತಾನೊಂದೆ ವಲಂ ಎನ್ನುವಂತೆ ಶರಣರು ಸಹ ಇದನ್ನೆ ಹೇಳುತ್ತ ಪಾಲಿಸುತ್ತಿದ್ದಾರೆ. ಅವರ ಆಶೀರ್ವಾದವು ಸದಾ ನಮ್ಮಗಳ ಮೇಲಿರಲೆಂದು ನುಡಿದರು.

ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವ 2018ರ ಗೌರಾಧ್ಯಕ್ಷರಾದ ಮಧುರೆ ಹೊಸದುರ್ಗದ ಶ್ರೀ ಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಕಾರ್ಯಧ್ಯಕ್ಷರಾದ ಪಟೇಲ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್, ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟ ಶ್ರೀನಿವಾಸ್ ಮೂರ್ತಿ, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಾಹಕ ನಿರ್ದೇಶಕರುಗಳಾದಡಾ.ಈ.ಚಿತ್ರಶೇಖರ್,ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಾಹಣಾಧಿಕಾರಿ ದೊರೆಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ವಚನಗೀತೆ ಪ್ರಾರ್ಥಿಸಿ,ಪ್ರದೀಪ್‍ಕುಮಾರ್.ಜಿ.ಟಿ. ಸ್ವಾಗತಿಸಿ, ಪ್ರೊ.ಸಾಲಿಮಠ್ ನಿರೂಪಿಸಿ ವಂದಿಸಿದರು.

Trending

Exit mobile version