ದಿನದ ಸುದ್ದಿ
ಚಿತ್ರದುರ್ಗ | ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಮದ್ಯ ಸಾಗಾಟ ; 4 ಮಂದಿ ಬಂಧನ
ಸುದ್ದಿದಿನ,ಚಿತ್ರದುರ್ಗ : ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದವರನ್ನು ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಘಟನೆ ವಿವರ
ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಮದ್ಯ ಸಾಗಾಟ ಆರೋಪದ ಮೇರೆಗೆ, ಆಂಬ್ಯುಲೆನ್ಸ್ ಚಾಲಕ ಸುಹಾನ್, ಲ್ಯಾಬ್ ಟೆಕ್ನೀಶಿಯನ್ ಸಂತೋಷ್ ಅರೆಸ್ಟ್ ಮಾಡಲಾಗಿದೆ.ಇದು ಹೆಚ್ ಡಿ ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಆಗಿದ್ದು, ಉಳ್ಳಾರ್ತಿ ಗ್ರಾಮದ ನರಸಿಂಹರಾಜುಗೆ ಸೇರಿದ ಎರಡು ಬಾರ್ ಗಳಿಂದ ಮದ್ಯ ಸಾಗಾಟ ಮಾಡುತ್ತಿದ್ದಾಗ, ಮಲ್ಲಾಡಿಹಳ್ಳಿ ಬಳಿ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದ್ದಾರೆ.
ನಂತರ ಆಂಬ್ಯುಲೆನ್ಸ್ ನಿಂದ ಖಾಸಗಿ ಓಮ್ನಿಯಲ್ಲಿ ಬೇರೆ ಬೇರೆ ಕಡೆಗೆ ಮದ್ಯ ಸಾಗಾಟ ನಡೆಯುತ್ತಿದ್ದು, ಓಮ್ನಿಯಲ್ಲಿ ಬೇರೆಡೆಗೆ ಮದ್ಯ ಸಾಗಿಸುತ್ತಿದ್ದ ಜೀವನ್ ಮತ್ತು ಗಿರೀಶ್ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
90ರೂ ಬೆಲೆಬಾಳುವ ಮದ್ಯದ ಪೌಚ್ ಗಳನ್ನು 500ರೂ.ಗೆ ಮಾರಾಟ ಮಾಡುತ್ತಿದ್ದರು ಈ ಆರೋಪಿಗಳು. 69ಸಾವಿರ ರೂ ಬೆಲೆ ಬಾಳುವ ಮದ್ಯದ ಪೌಚ್, 1ಆಂಬ್ಯುಲೆನ್ಸ್, 1ಮಾರುತಿ ಓಮ್ನಿ ವಶ, ಒಟ್ಟು ನಾಲ್ವರನ್ನು ಬಂಧಿಸಿದ್ದು,ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243