ದಿನದ ಸುದ್ದಿ
ಚಿತ್ರದುರ್ಗ | ‘ಅನಿಮಲ್ ರೆಸ್ಕ್ಯೂ’ ತಂಡದಿಂದ ಪ್ರಾಣಿಗಳಿಗೆ ಆಹಾರ ಪೂರೈಕೆ ; ಜನರ ಮೆಚ್ಚುಗೆ
ಸುದ್ದಿದಿನ,ಚಿತ್ರದುರ್ಗ : ನಗರದಲ್ಲಿ ಕೋವಿಡ್ 19 ತಡೆಗಟ್ಟಲು ಲಾಕ್ ಡೌನ್ ಹಿನ್ನೆಲೆ ಮೂಕ ಪ್ರಾಣಿಗಳಿಗೆ ಆಹಾರ ವಿತರಣೆಯನ್ನು ಅನಿಮಲ್ ರೆಸ್ಕ್ಯೂ ತಂಡದಿಂದ ಮೂಖ ಪ್ರಾಣಿಗಳಿಗೆ ಆಹಾರ ಪೂರೈಕೆ ಮಾಡಲಾಯಿತು.
ಬೀದಿ ನಾಯಿಗಳಿಗೆ, ಬಿಡಾದಿ ಹಸು ದನಗಳಿಗೆ, ಕೋತಿಗಳಿಗೆ ಹಣ್ಣು ತರಕಾರಿ ವಿತರಿಸಲು ಲಾಕ್ ಡೌನ್ ಆರಂಬವಾದ ದಿನದಿಂದಲೂ ಅನಿಮಲ್ ರೆಸ್ಕ್ಯೂ ತಂಡದ ಯುವ ಸಮೂಹ ಸುಮಾರು 15 ಜನರ ತಂಡದಿಂದ ಪ್ರತಿನಿತ್ಯವೂ ಒಂದೊಂದು ಬಡಾವಣೆಯಲ್ಲಿ ಪ್ರಾಣಿಗಳಿಗೆ ಆಹಾರ ಪೂರೈಕೆ ಮಾಡುತ್ತಿದೆ.
ಸ್ವಂತ ಕರ್ಚಿನಿಂದಲೇ ಹಣ್ಣು, ತರಕಾರಿ, ಹಾಲು, ಮೊಟ್ಟೆ ತಂದು ಆಹಾರ ಪದಾರ್ಥ ಪೂರೈಸುತ್ತಿದೆ ಈ ತಂಡ. ಮೂಖ ಪ್ರಾಣಿಗಳು ಹಸಿವು ನೀಗಿಸುತ್ತಿರುವ ತಂಡಕ್ಕೆ ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243