ದಿನದ ಸುದ್ದಿ
ಚಿತ್ರದುರ್ಗದ ಪೌರ ಕಾರ್ಮಿಕರಿಗೊಂದು ಸಲಾಂ: ಬೆಳಗ್ಗೆಯೇ ಕ್ಲೀನ್ ಆಯ್ತು ಸಿಟಿ !
ನಾಗೇಂದ್ರರೆಡ್ಡಿ, ಚಿತ್ರದುರ್ಗ
ನಗರದಲ್ಲಿ ಶನಿವಾರ ನಡೆದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ನಂತರ ಮುಖ್ಯ ರಸ್ತೆಗಳು ಊಟದ ತಟ್ಟೆ ಹಾಗೂ ಪ್ಲಾಸ್ಟಿಕ್ ಮಯ ವಾಗಿದ್ದವು. ಭಾನುವಾರ ಬೆಳಗ್ಗೆ ಆರು ಗಂಟೆಗೆ ರಸ್ತೆಗಳಿಗಿದ ಸುಮಾರು 170 ರಿಂದ 200 ಪೌರ ಕಾರ್ಮಿಕರು ಇಡೀ ರಸ್ತೆಗಳನ್ನು ಸ್ವಚ್ಛಗೊಳಿಸಿದರು.
ಚಿತ್ರದುರ್ಗದ ಮುಖ್ಯ ರಸ್ತೆ ಚಳ್ಳಕೆರೆ ಗೇಟ್ ನಿಂದ ಕನಕ ವೃತ್ತದ ವರೆಗೆ ಸ್ವಚ್ಚತಾ ಕಾರ್ಯ ನಡೆಸಲಾಯಿತು. ಎರಡು ಲಾರಿ ಹಾಗೂ ಎಂಟು ಟ್ರ್ಯಾಕ್ಟರ್ ಗಳಿದ್ದವು. ಸುಮಾರು ಇಪ್ಪತ್ತು ಲೋಡ್ ಕಸ ಸಂಗ್ರಹವಾಯಿತು. ನಗರದ ಹೊರ ವಲಯದಲ್ಲಿರುವ ನಗರಸಭೆ ಸೇರಿದ ಜಾಗದಲ್ಲಿ ಕಸ ವಿಲೇವಾರಿ ಮಾಡಲಾಯಿತು.
ಗಣಪತಿ ಉತ್ಸವದ ವೇಳೆ ವಿವಿಧ ಸಂಘ ಸಂಸ್ಥೆಗಳು ಉಚಿತವಾಗಿ ಅನ್ನ ದಾಸೋಹ ನೀಡಿದವು. ಈ ವೇಳೆ ಊಟದ ತಟ್ಟೆ ಹಾಗೂ ಪ್ಲಾಸ್ಟಿಕ್ ರಸ್ತೆ ಅಕ್ಕಪಕ್ಕದಲ್ಲಿ ಬಿದ್ದಿದ್ದವು. ಇಡೀ ಮುಖ್ಯ ರಸ್ತೆ ಕಸದಿಂದ ತುಂಬಿತ್ತು. ಅದನ್ನು ಲೆಕ್ಕಿಸದೆ ಪೌರ ಕಾರ್ಮಿಕರು ಕೆಲವೇ ಗಂಟೆಗಳಲ್ಲಿ ಇಡೀ ರಸ್ತೆಯನ್ನು ಸ್ವಚ್ಛಗೊಳಿಸಿದರು. ಕಾರ್ಮಿಕರ ಈ ಕಾರ್ಯಕ್ಕೆ ದುರ್ಗದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿವಣ್ಣ, ಚಿತ್ರದುರ್ಗ ಪೌರ ಕಾರ್ಮಿಕರ ಉಸ್ತುವಾರಿ