ದಿನದ ಸುದ್ದಿ

ಯೋಗಾಸನ ಮಾಡಿ ಗಮನ ಸೆಳೆದ ಚಿತ್ರದುರ್ಗ ವಿದ್ಯಾವಿಕಾಸ ಮಕ್ಕಳು!

Published

on

ಚಿತ್ರದುರ್ಗ: ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಚಿತ್ರದುರ್ಗ ಜಿಲ್ಲಾ ಯೋಗಾ ಸಮಿತಿಯ ಕಾರ್ಯದರ್ಶಿ ಓಂ ಪಾವನ ಪ್ರಿಯ ಅವರು ಸತತವಾಗಿ 4 ದಿನಗಳಿಂದ ತರಬೇತಿ ನೀಡಿರುವುದರ ಮೂಲಕ ಅದಕ್ಕೊಂದು ಅರ್ಥ ಬರುವಂತೆ ಈ ದಿನ ಯೋಗಾಸನಗಳ ಯಶಸ್ವಿ ಪ್ರದರ್ಶನದ ಮೂಲಕ ಸಾರ್ಥಕತೆ ಪಡೆದಂತಾಯಿತು.

‘ಯೋಗ’ ಇದು ಮೂಲತಃ ಭಾರತದ ಪಾರಂಪರಿಕ ದೈಹಿಕ ಅಭ್ಯಾಸವಾಗಿದ್ದು, ಮನುಷ್ಯನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಪೂರ್ವಜರು ಹಾಕಿಕೊಟ್ಟ ಬುನಾದಿಯಾಗಿದೆ. ಪ್ರಸ್ತುತ ದೇಶದ ಪ್ರಧಾನಿಯವರು ಯೋಗವನ್ನು ಅಂತಾರಾಷ್ಟ್ರೀಯ ದಿನಾಚರಣೆಯಾಗಿ ದೃಢೀಕರಿಸುವುದರ ಮೂಲಕ ಪ್ರಪಂಚದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ್ ಕುಮಾರ್‍ ಮಾತನಾಡಿ, ಯೋಗ ನಮ್ಮ ದೇಶದ ಕೊಡುಗೆ ಇದನ್ನು ಪ್ರಪಂಚಕ್ಕೆ ಪರಿಚಯಿಸುವಲ್ಲಿ ನಾವೆಲ್ಲರೂ ಶ್ರಮವಹಿಸಬೇಕು. ಯೋಗ ದೇಹಕ್ಕೂ ಮನಸ್ಸಿಗೂ ಅತಿಮುಖ್ಯ ವ್ಯಾಯಾಮವಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಯೋಗವು ಏಕಾಗ್ರತೆಯನ್ನು ತಂದುಕೊಟ್ಟು ಮಗುವು ದಿನವಿಡಿ ಚಟುವಟಿಕೆಯಿಂದಿರಲು ಸಹಕಾರಿಯಾಗಿದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್, ಸಿ.ಡಿ, ಕ್ಯಾಂಪಸ್ ಇನ್‍ಚಾರ್ಜ್ ಪೃಥ್ವೀಶ್ ಎಸ್.ಎಂ, ಹೆಡ್ ಕೋ-ಆರ್ಡಿನೇಟರ್ ಬಸವರಾಜಯ್ಯ ಉಪಸ್ಥಿತರಿದ್ದರು. ವೀರೇಶ್ ಎಂ .ಬಿ ಸ್ವಾಗತಿಸಿ, ತಿಪ್ಪೇಸ್ವಾಮಿ ಎನ್.ಜಿ. ವಂದನಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

Trending

Exit mobile version