ದಿನದ ಸುದ್ದಿ
ಕೋಟೆನಾಡಿಗೆ ಬಂದ್ರು ಯಂಗ್ ಆಫೀಸರ್ಸ್ !
ಸುದ್ದಿದಿನ ಡೆಸ್ಕ್: ರಾಜ್ಯ ಸರ್ಕಾರ ಎಂಟು ಐಎಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆಸಿದ್ದು, ಚಿತ್ರದುರ್ಗ ನೂತನ ಜಿಲ್ಲಾಧಿಕಾರಿ ಆರ್.ಗಿರೀಶ್, ನೂತನ ಎಸ್‍ಪಿ ಆಗಿ ಡಾ.ಕೆ.ಅರುಣ್ ನೇಮಕಗೊಂಡಿದ್ದಾರೆ.
ಡಿಸಿ ಆರ್.ಗಿರೀಶ್ ಜವಳಿ ಹಾಗೂ ಕೈಮಗ್ಗ ಇಲಾಖೆಯ ಆಯುಕ್ತರಾಗಿ ಕೆಲಸ ಮಾಡಿದ್ದು. ಇನ್ನು ನೂತನ ಎಸ್ಪಿ ಡಾ.ಕೆ.ಅರಣ್ ಅವರು ಲೋಕಾಯುಕ್ತ ಇಲಾಖೆ ವಿಶೇಷ ತನಿಖಾ ದಳದ ಎಸ್ಪಿಯಾಗಿ ಕೆಲಸ ಮಾಡಿದ್ದಾರೆ. ಇನ್ನು ಹಿಂದಿನ ಜಿಲ್ಲಾಧಿಕಾರಿ ವಿಜಯ ಜೋತ್ಸ್ನಾ ಹಾಗೂ ಎಸ್ಪಿ ಶ್ರೀನಿವಾಸ ಜೋಶಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸ್ಥಳ ನಿಗದಿ ಮಾಡಿಲ್ಲ.