ಲೈಫ್ ಸ್ಟೈಲ್

ಪಕ್ಕಾ ಚಾಕೊಲೇಟ್ ಗರ್ಲ್..!

Published

on

ಚಾಕಲೇಟ್ ಯಾರಿಗೆ  ತಾನೇ ಇಷ್ಟವಿಲ್ಲ. ಮಕ್ಕಳಿಂದ ವೃದ್ಧರು ಬಾಯಲ್ಲಿ ನೀರೂರಿಸುವ ಚಾಕಲೇಟ್ ಈಗ ಬ್ಯೂಟಿ ಪ್ರಪಂಚದಲ್ಲಿ ತನ್ನದೇ ಛಾಪು ಮೂಡಿಸಿದೆ. ಚಾಕಲೇಟ್ ಮೇಕಪ್ ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಸದ್ದು ಮಾಡುತ್ತಿರುವ ಟ್ರೆಂಡ್ ಪಟ್ಟಿಗೆ ಸೇರ್ಪಡೆಯಾಗಿದೆ. ಬಾಯಿ ಚಪಲಕ್ಕೆ ತಿನ್ನುತ್ತಿದ್ದ ಚಾಕಲೇಟ್ ಈಗ ಮೇಕಪ್ ರೂಪ ಪಡೆದಿದೆ. ಯುವತಿಯರಿಗಂತೂ ಚಾಕಲೇಟ್ ಎಂದರೆ ಪಂಚಪ್ರಾಣ. ಈ ವೀಕ್ನೆಸ್ ಅರಿತ  ಬ್ಯೂಟಿ ಎಕ್ಸ್ಪ್ರೆಟ್ಗಳು ಇದನ್ನೇ ಒಂದು ಟ್ರೆಂಡ್ ಆಗಿಸಿದ್ದಾರೆ. ಚಾಕಲೇಟ್ ವ್ಯಾಮೋಹ ವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ ಸೌಂದರ್ಯ ತಗ್ನರು.. ಈಗಾಗಲೇ ಚಾಕಲೇಟ್ ವ್ಯಾಕ್ಸಿಂಗ್.. ಚಾಕಲೇಟ್ ಪೆಡಿಕ್ಯೂರ್.. ಚಾಕಲೇಟ್ ಮೆನಿಕ್ಯೂರ್.. ಚಾಕಲೇಟ್ ಫೇಷಿಯಲ್ ಗಳನ್ನು ನೋಡಿದ್ದೀವಿ..ಈಗ   ಚಾಕಲೇಟ್ ಮೇಕಪ್ ಸರದಿ! ಚಾಕಲೇಟ್ ನಷ್ಷೇ ಚಾಕಲೇಟ್ ಬಣ್ಣ ಯುವತಿಯರಿಗೆ ಬಲು ಪ್ರೀತಿ..

ಚಾಕಲೇಟ್ ಲಿಪ್ಸ್ಟಿಕ್!

ಚಾಕಲೇಟ್ ಬಣ್ಣದ ಲಿಪ್ಸ್ಟಿಕ್ ಮಾರುಕಟ್ಟೆಯಲ್ಲಿ ಈಗಾಗಲೇ ಹಳೆಯದಾಗಿ ಹೋಗಿದೆ.. ಈಗ ಬಂದಿರುವ ಹೊಸ ಚಾಕಲೇಟ್ ಲಿಪ್ಸ್ಟಿಕ್ ಅನ್ನು ನೀವು ಧರಿಸುವುದಲ್ಲದೇ, ಸವಿಯಲು ಬಹುದು. ಈ ಲಿಪ್ಸ್ಟಿಕ್ ನ ವಿಶೇಷ ಅಡಗಿರುವುದೇ ಇಲ್ಲಿ..ಮಹಿಳೆಯರ ಲಿಪ್ಸ್ಟಿಕ್ ಮೋಹ ಅರಿತಿದ್ದ ಕಂಪನಿ ಒಂದು ತುರಿಯನ್ನು ಅಲಂಕರಿಸಿ, ಹಾಗೇ ವಿಯಲೂ ಬಹುದಾದ “ಎಡಿಬಲ್ ಚಾಕಲೇಟ್ ಲಿಪ್ಸ್ಟಿಕ್ “ಅನ್ನು ನವಂಬರ್ 2017 ರಲ್ಲಿ ಮಾರುಕಟ್ಟೆಗೆ ತಂದಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಅತ್ಯುತ್ತಮವಾಗಿದೆ. ಕೆಂಪು, ಗುಲಾಬಿ ಹಾಗೂ ಪಿಂಕ್ ಬಣ್ಣಗಳಲ್ಲಿ ಸದ್ಯ ಇವು ಲಭ್ಯವಿದೆ.

ಬ್ಯೂಟಿ ಬ್ಲಾಗರ್ಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮೆಲ್ಟೆಡ್ ಚಾಕಲೇಟ್ ಅನ್ನು ತುಟಿಗಳಿಗೆ ಲಿಪ್ಸ್ಟಿಕ್ ನಂತೆ ಬಳಸಿ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ! ಒಟ್ಟಿನಲ್ಲಿ  ಚಾಕಲೇಟ್ ಬಣ್ಣದ ಲಿಪ್ಸ್ಟಿಕ್ ಹಚ್ಚಿ ಕೊಳ್ಳುವುದು ಈ 2018ರ ಹೊಸ ಫ್ಯಾಷನ್ ಎನಿಸಿಕೊಂಡಿದೆ.

ಚಾಕಲೇಟ್ ನೈಲ್ ಆರ್ಟ್!

ತಿನ್ನೋಕೆ ಅಷ್ಟೇ ಅಲ್ಲ, ಕೈ ಉಗುರಿನ ಮೇಲೂ ಚಾಕಲೇಟ್ ಹೋಲುವ ನೈಲ್ ಆರ್ಟ್ ಮಾಡಲಾಗುತ್ತದೆ. ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಚಾಕಲೇಟ್ ನ ಪುಟ್ಟ ಪುಟ್ಟ ಬಾಕ್ಸ್ ಹೋಲುವ ಚೌಕ ಗಳನ್ನು ಚಾಕಲೇಟ್ ನಲ್ಲಿಯೇ ಮೂಡಿಸುವ ಕ್ರೇಜ್ ಯುವತಿಯರ ಗಮನ ಸೆಳೆಯುತ್ತಿದೆ. ಕ್ಯಾಂಡಿ ನೈಲ್ ಆರ್ಟ್ ಟೀನೇಜರ್ ಗಳ ಎಂದಿಗೂ ಮಾಸದ ಫೇವರಿಟ್ ನೈಲ್ ಆರ್ಟ್ ಆಗಿದೆ. ಬಣ್ಣ ಬಣ್ಣದ ಕ್ಯಾಂಡಿ ಗಳನ್ನು ಉಗುರಿನ ಮೇಲೆ ರಚಿಸುವ ಫ್ಯಾಷನ್ ಈಗ ಬ್ಯೂಟಿ ಲೋಕದ ಹೊಸ ಟ್ರೆಂಡ್!

ಚಾಕಲೇಟ್ ಸ್ಮೋಕೀ ಐಸ್ ! 

ಕಣ್ಣಿನ ಆಕರ್ಷಣೆ ಹಚ್ಚಿಸಲು ಯುವತಿಯರು ಚಾಕಲೇಟ್ ಮೇಕಪ್ ನ ಮೊರೆ ಹೋಗುತ್ತಿದ್ದಾರೆ. ಫಾಡ ಬ್ರೌನ್ , ಬ್ರಾಂಜ್ , ಕಾಪರ್, ಗೋಲ್ಡ್ ಬಣ್ಣದ ಕಾಂಬಿನೇಷನ್ ಬಳಸಿ ಮಾಡಲಾಗುವ ಚಾಚಾಕಲೇಟ್ ಸ್ಮೋಕೀ ಐಸ್ ಮೇಕಪ್ , ಅಡ್ಡಿಗಳು ನಿದ್ದೆ ಕೆಡಿಸಿದೆ. ಕಣ್ಣಿನ ಆಕರ್ಷಣೆಯನ್ನು ದುಪ್ಪಟ್ಟು ಮಾಡುತ್ತಿದೆ ಈ ಚಾಕಲೇಟ್ ಐಸ್!

ರಾತ್ರಿ ಪಾರ್ಟಿ ಗಳಿಗೆ ಹೇಳಿಮಾಡಿಸಿದಂತಿದೆ ಈ ಲುಕ್. ಕಣ್ಣಿನಲ್ಲೇ ಕೊಲ್ಲುವ ಶಕ್ತಿ ಇದೆ ಈ ಚಾಕಲೇಟ್ ಲುಕ್ಕಿಗೆ. ರಾಂಪ್, ಫ್ಯಾಷನ್ ಷೋ, ಫೋಟೋ ಶೂಟ್ ಗಳಲ್ಲಿ ಈಗಾಗಲೇ ಸದ್ದು ಮಾಡುತ್ತಿದೆ ಈ ಚಾಕಲೇಟ್ ಮೇಕಪ್!

ಚಾಕಲೇಟ್ ಮೇಕಪ್!

ಸಾಮಾನ್ಯವಾಗಿ ಕೆಂಪು ಅಥವಾ ಗುಲಾಬಿ ಬಣ್ಣದ ಲಂಗನ್ನು ಕೆನ್ನೆಗೆ ಹೆಚ್ಚುವುದು ರೂಢಿ. ಆದರೆ ಚಾಕಲೇಟ್ ಮೇಕಪ್ ನಲ್ಲಿ ಫಾಡ ಬ್ರೌನ್ , ಬ್ರಾಂಜ್ , ಕಾಪರ್, ಗೋಲ್ಡ್ ಬಣ್ಣದ ಮಿಶ್ರಣ ವನ್ನು ಕೆನ್ನೆಗೆ ಹಚ್ಚಿ ಆಕರ್ಷಕ ಪಾರ್ಟಿ ಲುಕ್ ನೀಡಲಾಗುತ್ತಿದೆ. ಸೆಲಿಬ್ರಿಟಿಗಳು, ಮಾಡಲ್ಗಳು ಈ ಚಾಕಲೇಟ್ ಮೇಕಪ್ ಗೆ ಫುಲ್ ಫಿದಾ ಆಗಿದ್ದಾರೆ.

ಸ್ಟೈಲ್ ಟಿಪ್ಸ್!

1. ಚಾಕಲೇಟ್ ಮೇಕಪ್ ರಾತ್ರಿ ಪಾರ್ಟಿ ಹಾಗೂ ರಾಂಪ್ ಗಳಲ್ಲಿ ಹೆಚ್ಚು ಸೂಕ್ತ ಎನಿಸುತ್ತದೆ. ಸೀಕ್ವಿನ್ (ಚಮಕಿ) ಉಡುಪುಗಳೊಂದಿಗೆ ಈ ಮೇಕಪ್ ನಿಮ್ಮ ಸ್ಟೈಲ್ ಸ್ಟೇಟ್ಮೆಂಟನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗುತ್ತದೆ.

2. ಡಸ್ಕಿ ಲುಕ್ ನೀಡುವಲ್ಲಿ ಈ ಮೇಕಪ್ ಬಿಳಿ.. ಕಪ್ಪು.. ಚಾಕಲೇಟ್ ಬಣ್ಣದ ಉಡುಪುಗಳೊಂದಿಗೆ ಸರಿ ಹೊಂದುತ್ತದೆ.

3.ಚಾಕಲೇಟ್ ನೈಲ್ ಆರ್ಟ್ ಎಲ್ಲ ಬಣ್ಣದ ಹಾಗೂ ಎಲ್ಲಾ ರೀತಿಯ ಉಡುಪುಗಳೊಂದಿಗೆ ಮ್ಯಾಚ್ ಆಗುತ್ತದೆ. ಸಮಾರಂಭ ಗಳಲ್ಲಿ ನಿಮ್ಮಸ್ಟೈಲ್ ಸ್ಟೇಟ್ಮೆಂಟ್ಅನ್ನು ಇದು ತೋರ್ಪಡಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401 

Leave a Reply

Your email address will not be published. Required fields are marked *

Trending

Exit mobile version