ದಿನದ ಸುದ್ದಿ

ಸಿಐಎಸ್ಎಫ್ ನೇಮಕಾತಿ 2018: 519 ಎಎಸ್ಐ ಹುದ್ದೆಗಳು ಅರ್ಜಿ ಆಹ್ವಾನ

Published

on

ಸುದ್ದಿದಿನ ಬೆಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ದಳದಲ್ಲಿ ಖಾಲಿ ಇರುವ 519 ಸಹಾಯಕ ಸಬ್ ಇನ್,ಸ್ಪೆಕ್ಟರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 15, 2018 ಕೊನೆಯ ದಿನವಾಗಿದೆ. ಲಿಮಿಟೆಡ್ ಡಿಪಾರ್ಟ್‌ಮೆಂಟಲ್ ಕಾಂಪಿಟೇಟಿವ್ ಎಕ್ಸಾಮಿನೇಷನ್ (LDCE-2018)ನಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಒಬ್ಬ ಅಭ್ಯರ್ಥಿಗೆ ಮೂರು ಬಾರಿ ಅವಕಾಶಗಳಿವೆ. ಹೆಚ್ಚಿನ ಮಾಹಿತಿ ಕೆಳಗಿನಂತಿವೆ;

ಸಂಸ್ಥೆ ಹೆಸರು: ಕೇಂದ್ರೀಯ ಕೈಗಾರಿಕಾ ಭದ್ರತಾ ದಳ (CISF).

ಹುದ್ದೆಗಳು: 519 ಹುದ್ದೆಗಳು
ಪರೀಕ್ಷೆ: ಲಿಮಿಟೆಡ್ ಡಿಪಾರ್ಟ್‌ಮೆಂಟಲ್ ಕಾಂಪಿಟೇಟಿವ್ ಎಕ್ಸಾಮ್ (LDCE-2018)
ವೆಬ್‌ಸೈಟ್: cisf.gov.in
ವಯೋಮಿತಿ: ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.

ಪ್ರಮುಖ ದಿನಾಂಕಗಳು:
‌ಅರ್ಜಿ ಸಲ್ಲಿಕೆಗೆ ಡಿಸೆಂಬರ್ 15 ಕೊನೇ ದಿನಾಂಕ.
‌ಲಿಖಿತ ಪರೀಕ್ಷೆ 2019ರ ಫೆಬ್ರವರಿ 24ಕ್ಕೆ
‌ಮಾರ್ಚ್ 18ರಂದು ಲಿಖಿತ ಪರೀಕ್ಷೆ ಫಲಿತಾಂಶ ಪ್ರಕಟ
‌ದೈಹಿಕ ಪರೀಕ್ಷೆ ಮತ್ತು ಪಿಇಟಿ ಏಪ್ರಿಲ್ 4ರಿಂದ ಆರಂಭ
‌ವೈದ್ಯಕೀಯ ಪರೀಕ್ಷೆ ಮೇ 6ರಂದು ಆರಂಭ.
‌ಬೇಸಿಕ್ ಟ್ರೇನಿಂಗ್ ಜೂನ್ 24ರಿಂದ ಆರಂಭ

ನೇಮಕಾತಿ ಪ್ರಕ್ರಿಯೆ:
ಐದು ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
೧  ಮತ್ತು ೨ನೇ ಹಂತದಲ್ಲಿ ಸಿಐಎಸ್ಎಫ್ ಇಎಂಆರ್ ಸೀಟ್ ಬೇಸಡ್ ಲಿಖಿತ ಪರೀಕ್ಷೆ ನಡೆಸಲಿದೆ. 200 ಅಂಕಗಳುಳ್ಳ ಬಹು ಆಯ್ಕೆಯ ಆಬ್ಜೆಕ್ಟಿವ್ ಪ್ರಶ್ನೆ ಪತ್ರಿಕೆ ನೀಡಲಿದೆ.
ಮೂರನೇ ಹಂತ: ಮೂರನೇ ಹಂತದಲ್ಲಿ ಪರೀಕ್ಷಾರ್ಥಿಗಳ ಫಿಸಿಕಲ್ ಮೇಜರ್ ಮೆಂಟ್ ತೆಗೆದುಕೊಳ್ಳಲಿದೆ.
ನಾಲ್ಕನೇ ಹಂತ: ನಾಲ್ಕನೇ ಹಂತದಲ್ಲಿ ದೈಹಿಕ ಕ್ಷಮತೆ ಪರೀಕ್ಷೆ ನಡೆಯಲಿದೆ.
ಐದನೇ ಹಂತ: ಐದನೇ ಹಂತದಲ್ಲಿ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಲಿದೆ.

ಫೈನಲ್ ಸೆಲೆಕ್ಷನ್:
ಅಭ್ಯರ್ಥಿಗಳ ಫೈನಲ್ ಸೆಲೆಕ್ಷನ್ ಆಗಲು ಸಾಮಾನ್ಯ ಅಭ್ಯರ್ಥಿ 50 ಅಂಕ, ಎಸ್ಸಿ, ಎಸ್ಟಿ ಅಭ್ಯರ್ಥಿಗಳು 45 ಅಂಕ ಪಡೆಯಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version