ದಿನದ ಸುದ್ದಿ
ರಸ್ತೆಗಾಗಿ ಬೆಳಗಾವಿಯಲ್ಲಿ “ರಾಡಿ ಕ್ರಾಂತಿ”
ಸುದ್ದಿದಿನ ಡೆಸ್ಕ್
ಸೌಲಭ್ಯ ಪಡೆಯಲು ಜನ ವಿಧ ವಿಧವಾಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಗುಂಡಿಯಲ್ಲಿ ಮೀನಿನಂತೆ ಮಲಗುವುದು, ಚಿತ್ರ ಬಿಡಿಸುವುದು ಸೇರಿದಂತೆ ಅನೇಕ ಬಗೆಯಲ್ಲಿ ಪ್ತತಿರೋಧ ವ್ಯಕ್ತಪಡಿಸುತ್ತಾರೆ. ಅದರಂತೆ ಕಿತ್ತೂರಿನಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಸಾರ್ವಜನಿಕರು ಮಳೆ ನೀರಿನ ಗುಂಡಿಯಲ್ಲಿ ಹೊರಳಾಡಿ ರಾಡಿ ಮೆತ್ತಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಕಿತ್ತೂರು ವೀರವನಿತೆ ರಾಣಿ ಚೆನ್ನಮ್ಮನ ನಾಡು. ಎದುರಾಳಿಯನ್ನು ಧೈರ್ಯದಿಂದ ಮೆಟ್ಟಿನಿಂತ ಊರಿದೆ. ಆದರೆ, ಗುಂಡಿಬಿದ್ದ ರಸ್ತೆ ದಾಟಿಹೋಗುವುದಕ್ಕೆ ಧೈರ್ಯ ಸಾಕಾಗುತ್ತಿಲ್ಲ. ಅಲ್ಲದೇ ಇಲ್ಲಿನ ಕೋಟೆ ವೀಕ್ಷಣೆ ಮಾಡಲು ನಿತ್ಯವೂ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕಿತ್ತೂರು ಪ್ರಾಧಿಕಾರವಿದ್ದರೂ ಪ್ರಯೋಜನ ಇಲ್ಲದಂತಾಗಿವೆ.
ಕಿತ್ತೂರ ಕ್ಷೇತ್ರದ ನಾಗರಿಕರು ರಸ್ತೆ ದುರಸ್ತಿಗಾಗಿ ರಾಡಿ ಕ್ರಾಂತಿ ಮಾಡುತ್ತಿರುವಾಗ ಜನಪ್ರತಿನಿಧಿನಿಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂಬುದು ನಾಗರಿಕರ ದನಿ.