ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯಲ್ಲಿ ಒಟ್ಟು 1255 ಕೊರೋನಾ ಕೇಸ್, 751 ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಶುಕ್ರವಾರ 77, ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಾಗೂ 84 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆsಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ. ಮತ್ತು 02 ಸಾವು ಸಂಭವಿಸಿದೆ.

ಈ ದಿನ ಕೋವಿಡ್-19 ದೃಢಪಟ್ಟ ಪ್ರಕರಣಗಳು ದಾವಣಗೆರೆಯಲ್ಲಿ 47, ಹರಿಹರದಲ್ಲಿ 16, ಜಗಳೂರಿನಲ್ಲಿ 06, ಚನ್ನಗಿರಿಯಲ್ಲಿ 05, ಹಾಗೂ ಅಂತರ್‍ಜಿಲ್ಲೆಯಿಂದ 03 ಕೋವಿಡ್-19 ಪ್ರಕರಣಗಳು ಇಂದು ವರದಿಯಾಗಿದೆ.

ತಾಲ್ಲೂಕುವಾರು ಬಿಡುಗಡೆಯಾದವರು ದಾವಣಗೆರೆಯಿಂದ 48, ಹರಿಹರದಿಂದ 17, ಜಗಳೂರಿನಿಂದ 04, ಚನ್ನಗಿರಿಯಿಂದ 03, ಹೊನ್ನಾಳಿಯಿಂದ 09, ಅಂತರ್‍ಜಿಲ್ಲೆಯಿಂದ 03, ಒಟ್ಟು 84 ಮಂದಿ ಇವರು ಸಂಪೂರ್ಣ ಗುಣಮುಖರಾಗಿ ಜು.23 ರಂದು ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ದಿನ ಮರಣ ಹೊಂದಿದವರು ಡಿ.ವಿ.ಜಿ 576, ಈ ವ್ಯಕ್ತಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಮತ್ತು 1247 ಈ ಇಬ್ಬರು ವ್ಯಕ್ತಿಗಳು ಜು. 22 ರಂದು ಮರಣ ಹೊಂದಿರುತ್ತಾರೆ.

ಒಟ್ಟು 1255 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 751 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹಾಗೂ 34 ಸಾವು ಸಂಭವಿಸಿದ್ದು. ಪ್ರಸುತ್ತ 470 ಪ್ರಸುತ್ತ ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version