ದಿನದ ಸುದ್ದಿ
ಎಲ್ಲಾ 90 ಸೋಂಕಿತರು ಡಿಸ್ಚಾರ್ಜ್ : ಕೊರೋನಾದಿಂದ ಕೊಂಚ ರಿಲೀಫ್ ನಲ್ಲಿ ಮೈಸೂರು
ಸುದ್ದಿದಿನ, ಮೈಸೂರು : ಮೈಸೂರಿನ ಎಲ್ಲಾ 90 ಸೋಂಕಿತರು ಡಿಸ್ಚಾರ್ಜ್ ಮಾಡಲಾಗಿದೆ. ಶುಕ್ರವಾರ ಕೊನೆಯ ಇಬ್ಬರು ರೋಗಿಗಳು ಕೂಡ ಗುಣಮುಖರಾಗಿದ್ದು ಡಿಸ್ಚಾರ್ಜ್ ಆದರು. ಇದರಿಂದ ಮೈಸೂರಿಗೆ ಕೊರೋನಾದಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಸದ್ಯಕ್ಕೆ ಮೈಸೂರಿನಲ್ಲಿ ಯಾವುದೇ ಆ್ಯಕ್ಟಿವ್ ಕೇಸ್ ಇರುವುದಿಲ್ಲ. ಎಲ್ಲಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದು, ಇದುವರೆಗೂ ಮೈಸೂರಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ಸೋಂಕು ಬೇರೆ ಕಡೆ ಹರಡದಂತೆ ತಡೆಯುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮುಂದಿನ 14 ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗದಿದ್ದಲ್ಲಿ ರೆಡ್ ಜೋನ್‌ನಿಂದ ಮೈಸೂರು ಗ್ರೀನ್ ಜೋನ್ ಆಗಿ ಬದಲಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243