ದಿನದ ಸುದ್ದಿ

ಇದು ಆಸ್ಪತ್ರೆ ಇಲ್ಲದ ಊರು, ನಿಧಾನವಾಗಿ ಚಲಿಸಿ : ಗ್ರಾಮಸ್ಥರಿಂದ ಸಿಎಂಗೆ ಎಚ್ಚರಿಕೆ

Published

on

ಸುದ್ದಿದಿನ,ಚಿಕ್ಕಮಗಳೂರು: ಇದು ಆಸ್ಪತ್ರೆ ಇಲ್ಲದ ಊರು, ನಿಧಾನವಾಗಿ ಚಲಿಸಿ ಮುಖ್ಯಮಂತ್ರಿಗಳೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬ್ಯಾನರ್ ಮೂಲಕ ಸ್ವಾಗತ ಕೋರಿರುವ ಘಟನೆ ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

ಮಂಗಳವಾರ ಶೃಂಗೇರಿ ಹಾಗೂ ಹರಿಹರಪುರ ಮಠಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿದ್ದರು. ಈ ಸಂದರ್ಭ ಅವರು ಶೃಂಗೇರಿಯ ಮೆಣಸೆ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ನಿಂದ ಕಾರಿನಲ್ಲಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ʻಇದು ಆಸ್ಪತ್ರೆ ಇಲ್ಲದ ಊರು, ಮುಖ್ಯಮಂತ್ರಿಗಳೇ ನಿಧಾನವಾಗಿ ಚಲಿಸಿʼ ಎಂದು ಬ್ಯಾನರ್ ಕಟ್ಟಿ ಗ್ರಾಮಸ್ಥರು ಟೀಕೆಗೊಳಪಡಿಸಿದರು.

ಸುಮಾರು 15 ವರ್ಷಗಳಿಂದ ನಾವು ಆಸ್ಪತ್ರೆಗಾಗಿ ಹೋರಾಡುತ್ತಿದ್ದೇವೆ. ಸರ್ಕಾರ ಬರೀ ಭರವಸೆ ನೀಡುತ್ತಿದೆ. ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಶೃಂಗೇರಿಯಲ್ಲಿ 100 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಹಾಗೂ ಇಲಾಖೆಯಿಂದ ಮಂಜೂರಾತಿ ಮಾಡಿಸುವುದು ನಮ್ಮ ಕೆಲಸ ಎಂದು ಮನವಿ ಸ್ವೀಕರಿಸಿದ ಬಳಿಕ‌ ಹೇಳಿದರು.

ಸ್ಥಳದ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ಸ್ಥಳ ಸಿಕ್ಕಕೂಡಲೇ ಕಾಮಗಾರಿ ಆರಂಭಿಸುತ್ತೇವೆ.
ಆದಷ್ಟು ಬೇಗೇ ಅದಕ್ಕೆ ಸ್ಥಳ ಮಂಜೂರಾತಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ಭರವಸೆಯನ್ನು ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version