ದಿನದ ಸುದ್ದಿ

ರಾಜಕಾರಣಿ ಕೆಲಸ ಗುಡಿ ಮಸೀದಿ ಕಟ್ಟೋದಲ್ಲ, ಬಡವನ ಮನೆ ಕಟ್ಟೋದು : ಸಿ.ಎಂ. ಇಬ್ರಾಹಿಂ

Published

on

ಸುದ್ದಿದಿನ,ಚಾಮರಾಜನಗರ : ಈ ದೇಶ ದರಿದ್ರ ಅವಕಾಶ ಕಂಡಿದ್ದು ಮೋದಿ ಆಳ್ವಿಕೆಯಲ್ಲಿ. ಕೆಟ್ಟಕಾಲಕ್ಕೆ ದುಡ್ಡು ಇಡ್ತಿದ್ವಿ. ಈಗ ದುಡ್ಡಿಗೂ ಕೆಟ್ಟ ಕಾಲ ಬಂದಿದೆ. ವಿವೇಚನೆ ಇಲ್ಲದ ಪ್ರಧಾನಿ ಬಂದಿದ್ದಾರೆ ಎಂದು ಚಾಮರಾಜನಗರದಲ್ಲಿ‌ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಸಿ.ಎಂ. ಇಬ್ರಾಹಿಮ್ ವಾಗ್ದಾಳಿ ನಡೆಸಿದರು.

ನಮ್ಮ ರಾಷ್ಟ್ರದ ಮಾಧ್ಯಮಗಳು ಎಚ್ಚೆತ್ತುಕೊಳ್ಳಬೇಕು. ಮನಮೋಹನ್ ಸಿಂಗ್ ಕಾಲದಲ್ಲಿ ಹಿಂದೆ ಗುರು ಮುಂದೆ ಗುರಿ ಇತ್ತು, ಸಾಗುತ್ತಿತ್ತು ಸೈನಿಕರ ಹಿಂಡು. ಇಂದು ಹಿಂದೆ ಗುರು, ಮುಂದೆ ಗುರಿ ಎರಡೂ ಇಲ್ಲ. ಅದಕ್ಕೇ ಸಾಗ್ತಿದೆ ಹೇಡಿಗಳ ಹಿಂಡು. ಇಂದು ಬಿಜೆಪಿಯಲ್ಲಿ ಎಲ್ಲಾ ಸಮಾಜಕ್ಕೂ ಅವಕಾಶ ಇಲ್ಲ. ಅಲ್ಲಿ ಬಸವ ತತ್ವಕ್ಕೆ ಅವಕಾಶವಿಲ್ಲ ಎಂದರು.

ಮೋದಿ ಆಳ್ವಿಕೆಯಲ್ಲಿ ನಮಗೆ ವಿದೇಶದಲ್ಲಾಗಲಿ, ವಿಶ್ವಸಂಸ್ಥೆಯಲ್ಲಾಗಲಿ ಬಲವಿಲ್ಲ. ರಾಜಕಾರಣಿ ಕೆಲಸ ಗುಡಿ ಮಸೀದಿ ಕಟ್ಟೋದಲ್ಲ, ಬಡವನ ಮನೆ ಕಟ್ಟೋದು ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version