ರಾಜಕೀಯ

‘ರಾಮನ ಬಗ್ಗೆ ಸಾಬರು ಮಾತನಾಡಿದ್ರೆ 24 ಗಂಟೆಯಲ್ಲಿ ಒದ್ದು ಒಳಗೆ ಹಾಕ್ತೀವಿ’ ಅಂದ ಸಿ.ಎಂ.ಇಬ್ರಾಹಿಂ ಮಾತಿನ ಮರ್ಮವೇನು..?

Published

on

ಸುದ್ದಿದಿನ,ವಿಜಯಪುರ : ಮುಸ್ಲಿಂರಲ್ಲಿ ಜಯಂತಿ ಮಾಡುವ ಪದ್ದತಿ ಬೇರೆ ಇದೆ.‌ಎಲ್ಲ ಮುಸ್ಲಿಂ ಲೀಡರ್, ಎಮ್ ಎಲ್ ಎ ಗಳು ಸೂಫಿ ಸಂತರು ಸೇರಿ ಇಸ್ಲಾಂ ಧರ್ಮದಲ್ಲಿ ಪೋಟೋ ಇಲ್ಲಾ, ಮೂರ್ತಿ ಇಲ್ಲ, ಪೂಜೆ ಇಲ್ಲಾ, ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಟಿಪ್ಪು ಬಗ್ಗೆ ಕೆಲವರು ಮಾತನಾಡೋದನ್ನ ಕೇಳಿದ್ರೆ ಖೇದವೆನಿಸುತ್ತೆ‌ ಎಂದು ಸಿಎಂ ಇಬ್ರಾಹಿಂ ಹೇಳಿದರು.

ನಮ್ಮಲ್ಲಿ ಬ್ಯಾಂಡ್ ಹಚ್ಚಿ, ಮೆರವಣಿಗೆ ಮಾಡೋ ಪದ್ದತಿ ಇಲ್ಲ.‌ಈ ಎಲ್ಲದರ ಬಗ್ಗೆ ಎಲ್ಲರೊಂದಿಗೆ ಸೇರಿ ಮಾತನಾಡಲಿದ್ದೇವೆ.‌ಟಿಪ್ಪು ವಿವಾದವನ್ನ ಬಳಸಿಕೊಂಡು ಬಿಜಪಿ ಓಟ್ ಬ್ಯಾಂಕ್ ಮಾಡಿಕೊಳ್ತಿದೆ.ಮುಂದಿನ ವರ್ಷದಿಂದ ಮುಸ್ಲಿಂರು ಶಿವಾಜಿ ಜಯಂತಿ ಮಾಡುತ್ತೇವೆ. ಯಾಕಂದ್ರೆ ಶಿವಾಜಿ ಸೆಕ್ಯೂಲರ್ ಕಿಂಗ್.ಶಿವಾಜಿ ಗುಪ್ತಚರ ಇಲಾಖೆಯಲ್ಲಿ ಮುಸ್ಲಿಂರಿದ್ದರು. ರಾಮನ ಬಗ್ಗೆ ಸಾಬರು ಮಾತನಾಡಿದ್ರೆ 24 ಗಂಟೆಯಲ್ಲಿ ಒದ್ದು ಒಳಗೆ ಹಾಕ್ತೀವಿ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version