ದಿನದ ಸುದ್ದಿ
ಕಮಿಷನ್ ವಿಚಾರದಲ್ಲಿ ಸಿದ್ದರಾಮಯ್ಯ ಪ್ರಮಾಣ ಮಾಡ್ತಾರಾ..? ಅವ್ರ ಕ್ಯಾಬಿನೆಟ್ ಸಚಿವರು ಪರ್ಸೆಂಟೇಜ್ ತಗೊಂಡಿಲ್ವಾ..? : ಸಿ.ಎಂ.ಇಬ್ರಾಹಿಂ
ಸುದ್ದಿದಿನ,ಮೈಸೂರು: ನನ್ನ ಕ್ಯಾಬಿನೆಟ್‌ನಲ್ಲಿ ಯಾವ ಸಚಿವರು ಪರ್ಸೆಂಟೇಜ್ ಪಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ಮಾಡ್ತಾರಾ..? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಷನ್ ವಿಚಾರದಲ್ಲಿ ಸಿದ್ದರಾಮಯ್ಯ ಪ್ರಮಾಣ ಮಾಡ್ತಾರಾ..? ಅಲ್ಲಿಯೂ ಬೇಕಾದಷ್ಟು ಪರ್ಸಂಟೇಜ್ ಇತ್ತು. ನಾನು ಅವರ ಜೊತೆಯಲ್ಲೇ ಇದ್ದವನು. ನನಗೆ ಎಲ್ಲವೂ ಗೊತ್ತಿದೆ, ಅದಕ್ಕೆ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಪರ್ಸೆಂಟೇಜ್ ತಗೆದುಕೊಂಡಿದ್ದಾರೆ ಎಂದು ನಾನು ಹೇಳಲ್ಲ. ಆದರೆ ಅವರ ಕ್ಯಾಬಿನೆಟ್‌ನಲ್ಲಿದ್ದವರು ತಗೊಂಡಿಲ್ವಾ.. ಹೇಳಲಿ ನೋಡಣಾ…? ಎಂದು ಸಿ.ಎಂ.ಇಬ್ರಾಹಿಂ ಸವಾಲು ಹಾಕಿದ್ದಾರೆ.
ಇನ್ನು ನಾವು ಬಿಜೆಪಿ ಬಗ್ಗೆ ಯಾವುದೇ ಮೃದು ಧೋರಣೆ ತೋರಿಲ್ಲ. ಬಿಜೆಪಿ ಜೊತೆ ನಾವು ಮೈತ್ರಿ ಮಾಡಿಕೊಳ್ಳಲ್ಲ. ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243