ರಾಜಕೀಯ

ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಗೈರು; ಅನಾರೋಗ್ಯ ಕಾರಣ ಮುಂದಿಟ್ಟ ಸಿಎಂಒ

Published

on

ಸುದ್ದಿದಿನ ಬೆಂಗಳೂರು: ವಿವಾದಾತ್ಮಕ ಟಿಪ್ಪು ಜಯಂತಿ ಸಂಭ್ರಮದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿದ್ದು, ವಿಧಾನಸೌಧದಲ್ಲಿ ಆಚರಿಸುತ್ತಿರುವ ಸರ್ಕಾರದ ಅಧಿಕೃತ ಟಿಪ್ಪು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಭಾಗವಹಿಸಿಲ್ಲ.

ಮುಖ್ಯಮಂತ್ರಿ ಕುಮಾರಸ್ವಾಮಿ ಅನಾರೋಗ್ಯದ ಕಾರಣದಿಂದ ಮೂರು ದಿನಗಳವರೆಗೆ ಸರ್ಕಾರದ ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಉದ್ಘಾಟಿಸಲಿರುವ ಟಿಪ್ಪು ಜಯಂತ್ಯುತ್ಸವದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಅವರ ಹೆಸರನ್ನೇ ಸೇರಿಸಲಾಗಿಲ್ಲ. ಅನಾರೋಗ್ಯ ಕಾರಣವಿಟ್ಟು ಜಯಂತ್ಯುತ್ಸವದಿಂದ ದೂರವುಳಿದಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದರಿಂದ ಪಕ್ಷ ಮುಜುಗರ ಪಟ್ಟುಕೊಳ್ಳುವಂತಾಗಿದೆ ಎಂದು ಕಾಂಗ್ರೆಸ್ ಕೆಲವರು ಹೇಳಿಕೊಂಡಿದ್ದಾರೆ.

ಜಯಂತ್ಯುತ್ಸವದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿಯವರ ಹೆಸರು ಪ್ರಕಟಿಸದಿರುವುದು ಹಿಂದಿನ ಉದ್ದೇಶ ಸ್ಪಷ್ಟವಾಗಿ ತಿಳಿಯುತ್ತದೆ. ಹೀಗಾಗಿ, ಕಳೆದ ಚುನಾವಣೆಯಲ್ಲಿ ಮೈಸೂರಿನ ಜನರು ಸಿದ್ದರಾಮಯ್ಯನವರನ್ನು ಸೋಲಿಸಿದ್ದಾರೆ. ಈಗ ಮತ್ತೊಮ್ಮೆ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದು ಬಿಜೆಪಿ ವಕ್ತಾರೆ ಮಾಲವಿಕಾ ಅವಿನಾಶ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಸಚಿವ ಜಮೀರ್ ಅಹ್ಮದ್ ಸೇರಿ ಕಾಂಗ್ರೆಸ್ ಕೆಲವು ಮುಖಂಡರು ಮುಖಮಂತ್ರಿಗಳ ಅನಾರೋಗ್ಯ ಕಾರಣವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಜಯಂತ್ಯುತ್ಸವ ಆಚರಣೆಯ ಸ್ಥಳದ ಬಗ್ಗೆ ಭಿನ್ನಮತಗಳಿದ್ದು, ಕೆಲವರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಬೇಕೆಂದಿದ್ದರು. ಮತ್ತೆ ಕೆಲವರು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆಬೇಕಿತ್ತು ಎಂದು ಬಯಸಿದ್ದರು.

Trending

Exit mobile version