ರಾಜಕೀಯ
ಒಣಗಿದ ತೆಂಗಿನ ಮರಕ್ಕೆ 500 ರೂ. ಪರಿಹಾರ; ತೆಂಗು ಬೆಳೆಗಾರರ ನೆರವಿಗೆ ಬಂದ ಸಿಎಂ ಕುಮಾರಸ್ವಾಮಿ
ಸುದ್ದಿದಿನ ಬೆಂಗಳೂರು: ರಾಜ್ಯದ ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, ಈ ಮೂಲಕ ಬರಗಾಲದಲ್ಲಿ ರೈತರ ನೆರವಿಗೆ ಬರಲು ಮುಂದಾಗಿದ್ದಾರೆ. ನೀರಿಲ್ಲದೇ ಒಣಗಿದ ತೆಂಗಿನ ಮರಗಳಿಗೆ ತಲಾ 500 ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಎಕರೆಗೆ 40 ಮರ ಹಾಳಾಗಿದ್ದರೆ, ಅಂತಹ ರೈತರಿಗೆ 20,000 ರೂ. ಪರಿಹಾರ ದೊರೆಯಲಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ಬೆಳೆಗಳಿಗೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಹೊಣೆ. ಆದರೆ ಈ ಹಿಂದೆ ಅನೇಕ ಮನವಿಗಳನ್ನು ಸಲ್ಲಿಸಿದರೂ ಇದುವರೆಗೂ ತೆಂಗು, ಅಡಿಕೆಗೆ ಬೆಳೆ ಪರಿಹಾರ ದೊರೆತಿಲ್ಲ. ತೆಂಗು, ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಲು ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹಾಕುವುದನ್ನು ಬಿಟ್ಟು ಸರ್ಕಾರ ಉರುಳಿಸುವ ಕಸರತ್ತು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.