ರಾಜಕೀಯ

ಪ್ರಧಾನಿ ಮೋದಿಗೆ ಕನ್ನಡ ಕಲಿಸಿದ ಸಿದ್ದು ಮೇಷ್ಟ್ರು !

Published

on

ಸುದ್ದಿದಿನ ವಿಶೇಷ: ರಾಜ್ಯ ಚುನಾವಣೆ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಪ್ರಚಾರ ಸಮಾರಂಭದಲ್ಲಿ ಪ್ರಧಾನಮಂತ್ರಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸುತ್ತಾರೆ. ಮೊದಲು ‘ನನ್ ಪ್ರೀತಿಯ ಕನ್ನಡಗರಿಗೆ ಪ್ರಣಾಮ್ ಗಳು’ ಎನ್ನುತ್ತಿದ್ದ ಮೋದಿ ಈಗ ಕನ್ನಡ ನಾಡಿನ ಹಲವು ಮಹನೀಯರ ಹೆಸರುಗಳ ಸಹಿತ ಒಂದು ಪ್ಯಾರದ ವರೆಗೆ ಕನ್ನಡದಲ್ಲೇ ಭಾಷಣ ಮಾಡುತ್ತಾರೆ. ದೇಶದ ಪ್ರಧಾನಿಗೆ ಕನ್ನಡ ಕಲಿಸುವಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮೇಷ್ಟ್ರು ಯಶಸ್ವಿಯಾಗಿದ್ದಾರೆ !!

ಹೌದು, ಪ್ರಪಂಚದ ಯಾವುದೇ ದೇಶಕ್ಕೆ ಹೋದರೂ ಹಿಂದಿಯಲ್ಲೇ ಮಾತನಾಡಿ ದಕ್ಕಿಸಿಕೊಂಡು ಬರುತ್ತಿದ್ದ ಪ್ರಧಾನಿ ಮೋದಿ ಅವರಿಗೆ ಕನ್ನಡ ಮಾತನಾಡುವ ಅನಿವಾರ್ಯತೆ ತಂದಿಟ್ಟಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆ.
ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ನ್ನು ಮಣಿಸಿ ಬಹುತೇಕ ದೇಶದಲ್ಲಿ ಪಾರುಪತ್ಯ ಸ್ಥಾಪಿಸುವ ಗುರಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಆರಂಭವಾದ ನಂತರ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿ ಚುನಾವಣೆ ಪ್ರಚಾರ ನಡೆಸಿದ್ದಾರೆ. ಕನ್ನಡಿಗರ ಮನ ಗೆಲ್ಲಬೇಕಾದರೆ ಕನ್ನಡದಲ್ಲೇ ಮಾತನಾಡವುದು ಅನಿವಾರ್ಯ ಎಂದು ಅರಿತಿರುವ ಬಿಜೆಪಿ ನಾಯಕರು ಪ್ರಧಾನಿ ಅವರಿಂದ ಶತಾಯಗತಾಯ ಒಂದು ಪ್ಯಾರವನ್ನಾದರೂ ಕನ್ನಡದಲ್ಲೇ ಭಾಷಣ ಓದಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿಗೆ ಕನ್ನಡ ಕಲಿಸಿದ ಸಿದ್ದು ಮೇಷ್ಟ್ರು !

ರಾಜ್ಯ ಚುನಾವಣೆ ಆರಂಭಕ್ಕೂ ಮೊನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಿದ್ದರು. ಆಗ ಮೋದಿ ನಾನು ಕೂಡ ಕನ್ನಡಿಗ ಎಂದು ಹೇಳಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಟಾಂಗ್ ನೀಡಿದ್ದ ಸಿಎಂ ಸಿದ್ದರಾಮಯ್ಯ ” ನಂ. 1 ರಾಜ್ಯ ಕರ್ನಾಟಕಕ್ಕೆ ಸ್ವಾಗತ’ ಎಂದು ಹೇಳಿ ‘ಕನ್ನಡಿಗನಾಗುವುದೆಂದರೆ..ಹೇಳಿ ಪಂಚ ಪ್ರಶ್ನೆ ಕೇಳಿದ್ದರು. ಕನ್ನಡದ ನೆಲ, ಜಲ, ವಿಚಾರದಲ್ಲಿ ಬಿಜೆಪಿ ನಡೆದುಕೊಳ್ಳಬೇಕಾದ ರೀತಿ ಕುರಿತು ಟಾಂಗ್ ನೀಡಿದ್ದರು. ಬಹುತೇಕ ಅಲ್ಲಿಂದ ಶುರುವಾಯಿತು ಪ್ರಧಾನಿ ಹಾಗೂ ಸಿದ್ದು ನಡುವಿನ ಕನ್ನಡ ಅಸ್ಮಿತೆಯ ಪ್ರಶ್ನೆ. ಪ್ರತಿ ಬಾರಿ ಪ್ರಧಾನಿಗೆ ಉತ್ತರಿಸುವವಾಗ ಕನ್ನಡನಾಡು, ನುಡಿಯ ಮನ್ನಣೆ ಅರಿತು ಮಾತನಾಡುತ್ತಿದ್ದರು. ಇದು ಪ್ರಧಾನಿ ಮೋದಿ ಕನ್ನಡದಲ್ಲಿ ಭಾಷಣ ಮಾಡುವಂತೆ ಪ್ರೇರೇಪಿಸಿತು ಎಂದರ ತಪ್ಪಿಲ್ಲ.

ಇದನ್ನು ಓದಿ: ‘ನಾನೂ ಕನ್ನಡಿಗ’ ಎಂದ ಪ್ರಧಾನಿಗೆ ಸಿಎಂ ಸಿದ್ಧರಾಮಯ್ಯ ಟ್ವಿಟರ್ ನಲ್ಲಿ ಟಾಂಗ್

ಕನ್ನಡದ ಅಸ್ಮಿತೆ ದೊಡ್ಡದು

ಕನ್ನಡ ನಾಡಿನಲ್ಲಿ ಜಾತಿ, ಧರ್ಮದ ವಿಚಾರದಂತೆ ಕನ್ನಡ ಭಾಷೆ ಕೂಡ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಮುನ್ನೆಲೆಗೆ ಬರುತ್ತದೆ. ಇದು ಕನ್ನಡಿಗರು ಭಾಷೆ ಮೇಲೆಯಿಟ್ಟರುವ ಅಭಿಮಾನಕ್ಕೆ ಪ್ರತೀಕ. ಚುನಾವಣೆ ಸಂದರ್ಭದಲ್ಲಿ ಜಾತಿ ಸಮೀಕರಣ ಎಷ್ಟು ಕೆಲಸ ಮಾಡುತ್ತದೆಯೋ ಅಷ್ಟೆ ಕನ್ನಡ ಭಾಷೆ ಕೂಡ ಕೆಲಸ ಮಾಡುತ್ತದೆ. ಸಿಎಂ ಸಿದ್ದರಾಮಯ್ಯ ಕೂಡ ಭಾಷೆ, ನಾಡಿನ ವಿಚಾರವಾಗಿ ಪ್ರಶ್ನೆಗಳು ಬಂದಾಗ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಹಿಂದಿ ಹೇರಿಕೆ ವಿಚಾರ ಬಂದಾಗ ‘ನಾನು ಈ ಮಣ್ಣಿನ ಮಗ’ ಎಂದು ಎಚ್ಚರಿಸಿದ್ದಾರೆ. ಸದ್ಯ ಈ ಎಲ್ಲಾ ಕಾರಣಗಳು ಪ್ರಧಾನಿ ಮೋದಿ ಅವರು ಪ್ರತಿ ಚುನಾವಣೆ ಪ್ರಚಾರದಲ್ಲಿ ಕನ್ನಡ ಮಾತನಾಡುವಂತೆ ಮಾಡಿವೆ.

ಇದನ್ನು ಓದಿ: ಕೃಷ್ಣ ಮಠಕ್ಕೆ ಭೇಟಿ ನೀಡದ ಪ್ರಧಾನಿ ಮೋದಿ : ಪೇಜಾವರ ಶ್ರೀಗಳ ಸ್ಪಷ್ಟನೆ

Leave a Reply

Your email address will not be published. Required fields are marked *

Trending

Exit mobile version