ದಿನದ ಸುದ್ದಿ
3 ನೇ ಪ್ಯಾಕೇಜ್ ಘೋಷಣೆ : ರೈತರಿಗೆ, ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ ಕೊಟ್ರು ಸಿಎಂ ಯಡಿಯೂರಪ್ಪ
ಸುದ್ದಿದಿನ, ಬೆಂಗಳೂರು : ಹತ್ತು ಲಕ್ಷ ಮೆಕ್ಕೆಜೋಳ ಬೆಳೆವ ರೈತರಿಗೆ ತಲಾ 5000 ಪರಿಹಾರವನ್ನು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈಗಾಗಲೇ ಶೇ. 50 ರಷ್ಟು ರೈತರು ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿದ್ದು, ಸರ್ಕಾರಕ್ಕೆ ಸುಮಾರು 500 ಕೋಟಿ ಹೊರೆ ಆಗಲಿದೆ ಎಂದರು.
ಶುಕ್ರವಾರ ತುರ್ತು ಸುದ್ದಿಗೋಷ್ಟಿ ನಡೆಸಿ ಮೂರನೇ ಪ್ಯಾಕೇಜ್ ಘೋಷಣೆ ಮಾಡಿ ಮಾತನಾಡಿದ ಅವರು, 40 ಸಾವಿರ ಅಶಾ ಕಾರ್ಯಕರ್ತೆಯರಿಗೆ 3000 ರೂ ಪರಿಹಾರ, ಸಹಕಾರ ಇಲಾಖೆಯಿಂದ
12.5 ಕೋಟಿ ಪರಿಹಾರ, ಕುರಿ ಮೇಕೆ ಅಪಘಾತದಲ್ಲಿ ಮೃತಪಟ್ಟರೆ 5000 ಪರಿಹಾರ ನೀಡಲಾಗುವುದು ಎಂದರು.
ರೈತರ ಬೆಳಗೆ ಸ್ಪರ್ಧಾತ್ಮಕ ಬೆಲೆ ಸಿಗಲಿದ್ದು, ರೈತರ ಕೈ ಹಿಡಿಯುವುದೇ ನಮ್ಮ ಆದ್ಯತೆಯಾಗಲಿದೆ. ಈ ಬಗ್ಗೆ ವಿಪಕ್ಷ ಮತ್ತು ರೈತ ಮುಖಂಡರ ಜತೆ ದೂರವಾಣಿ ಲ್ಲಿ ಮಾತಾಡಿದ್ದೇನೆ ಈಗಾಗಲೇ ಹಲವು ರಾಜ್ಯಗಳು ಇದನ್ನು ಅಳವಡಿಸಿಕೊಂಡಿವೆ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದರು.
ಮಾರುಕಟ್ಟೆಯಲ್ಲಿ ನೇರವಾಗಿ ಮಾರಾಟಕ್ಕೆ ಅವಕಾಶ ಇದೆ, ಇದರಿಂದ ರೈತರ ಬೆಳೆಗೆ ಉತ್ತಮಬೆಲೆ ಸಿಗಲಿದೆ, ಮಾರುಕಟ್ಟೆ ಕಮಿಟಿಗಳಿಗೆ ಯಾವುದೇ ತೊಂದರೆ ಇಲ್ಲ, ಮಾರುಕಟ್ಟೆ ಯ ಹೊರಗೂ ಮಾರಾಟಕ್ಕೆ ರೈತರಿಗೆ ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾರಜೋಳ, ಅಶ್ವತ್ ನಾರಾಯಣ್, ಸೋಮಣ್ಣ, ಹೆಬ್ಬಾರ್, ಸುಧಾಕರ್, ಸೋಮಶೇಖರ್, ಬಿಸಿ ಪಾಟೀಲ್,ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ,ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243