ದಿನದ ಸುದ್ದಿ
ರೈತರಿಗೆ ಹೆಕ್ಟೇರ್ ಗೆ 25 ಸಾವಿರ ಪರಿಹಾರ ನೀಡಲು ರಾಜ್ಯಸರ್ಕಾರದ ಮಹತ್ವದ ನಿರ್ಧಾರ : 2 ತಿಂಗಳ ವಿದ್ಯುತ್ ಬಿಲ್ ಮನ್ನಾ..!
ಸುದ್ದಿದಿನ,ಬೆಂಗಳೂರು : ಭೀಕರ ಕೊರೊನಾ ಎಫೆಕ್ಟ್ ನಿಂದಾಗಿ ರಾಜ್ಯದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ನಾವು ಈಗ ಲಾಕ್ಡೌನ್ ಅನ್ನು ಸರಳಗೊಳಿಸಿದ್ದೇವೆ. ಆದರೆ ಲಾಕ್ಡೌನ್ ನಿಲ್ಲಿಸಿದ್ದೇವೆ ಎಂದು ಅರ್ಥವಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಬುಧವಾರ ವಿಧಾನಸೌದದಲ್ಲಿ ತುರ್ತು ಪತ್ರಿಕಾಗೋಷ್ಠಿಯ ನಡೆಸಿ ಅವರು ಮಾತನಾಡಿದ ಅವರು, ನಾಳೆಯಿಂದ ಬಸ್ಸಿನಲ್ಲಿ ಕಾರ್ಮಿಕರನ್ನು ಕಳಿಸುವುದನ್ನು ನಿಲ್ಲಿಸಲಾಗುತ್ತೆದೆ. ಕಾರ್ಮಿಕರಿಗೆ ಲಾಕ್ ಡೌನ್ ಶುರುವಾದಾಗಿನಿಂದ, ಹಲವು ಬಿಲ್ಡರ್ಗಳು, ಕಂಪನಿಗಳು ಕೆಲಸ ಇಲ್ಲದಿದ್ದರೂ ಉಚಿತ ಊಟ, ವಸತಿಯನ್ನು ನೀಡಿದ್ದಾರೆ. ಹಾಗೆ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಅವರವರ ರಾಜ್ಯಕ್ಕೆ, ಸ್ಥಳಗಳಿಗೆ ಕಳಿಸಿ ಕೊಟ್ಟಿದ್ದೇವೆ ಎಂದರು.
ಪ್ರೆಸ್ ಮೀಟ್ ಹೈಲೈಟ್ಸ್
- ರಾಜ್ಯಕ್ಕೆ ₹1600 ಕೋಟಿ ಪ್ಯಾಕೇಜ್ ಘೋಷಣೆ.
- 11687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದ ಹೂವು ಮಾರಾಟವಾಗದೇ ನಮ್ಮ ರೈತರು ಬೆಳೆದ ಹೂವು ನಾಶವಾಗಿದ್ದು, ಒಂದು ಹೆಕ್ಟೇರ್ಗೆ 25 ಸಾವಿರ ರೂಪಾಯಿ ಪರಿಹಾರವನ್ನು ರೈತರಿಗೆ ನೀಡಲು ತೀರ್ಮಾನ.
- ರೈತರು ಬೆಳೆದ ತರಕಾರಿ ಮತ್ತು ಹಣ್ಣುಗಳಿಗೆ ಸರಿಯಾದ ದರ, ಮಾರುಕಟ್ಟೆ ಸಿಗದೇ ಸಂಕಷ್ಟಕ್ಕೆ ಒಳಗಾಗಿರುವ ಬೆಳೆಗಾರರಿಗೆ ಸೆಪರೇಟ್ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಅದರ ಬಗ್ಗೆ ಕೆಲವು ಅಧ್ಯಯನ ನಡೆಸಲಾಗುತ್ತಿದೆ.
- ರಾಜ್ಯದಲ್ಲಿ ಸುಮಾರು 15.8 ಲಕ್ಷ ಕಾರ್ಮಿಕರಿಗೆ 2 ಸಾವಿರ ರೂಪಾಯಿ ಸಹಾಯ ಧನ ನೀಡಲು ನಿರ್ಧಾರ.
- 60 ಸಾವಿರ ಅಗಸರಿಗೆ, 2 ಲಕ್ಷ 30 ಸಾವಿರ ಕ್ಷೌರಿಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರವನ್ನು ನೀಡಲು ನಿರ್ಧಾರ.
- ರಾಜ್ಯದಲ್ಲಿ 575 ಸಾವಿರ ಚಾಲಕರಿದ್ದು, ಅವರಿಗೂ ಸಹ ಒನ್ ಟೈಮ್ 5 ಸಾವಿರ ರೂಪಾಯಿ ಪರಿಹಾರ ನೀಡಲು ನಿರ್ಧಾರ.
- ರಾಜ್ಯ ಬಿಟ್ಟು ಹೊರಗೆ ಹೋಗುವುದನ್ನು ತಡೆಯಲು ಕಾರ್ಮಿಕರಿಗೆ 5 ಸಾವಿರ ರೂಪಾಯಿ ನೀಡಲು ಕೂಡ ನಿರ್ಧಾರ.
- ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ವಿದ್ಯುತ್ ಬಿಲ್ನ ಫಿಕ್ಸ್ಡ್ ಮಿನಿಮಮ್ ಚಾರ್ಜಸ್ ಅನ್ನು ಎರಡು ತಿಂಗಳ ಅವಧಿಗೆ ಸಂಪೂರ್ಣ ಮನ್ನಾ.
- ನೇಕಾರರಿಗೆ ನೆರವಾಗಲೂ ಈಗಾಗಲೇ 109 ಕೋಟಿ ವೆಚ್ಚದಲ್ಲಿ ನೇಕಾರ ಸಾಲ ಮನ್ನಾ ಯೋಜನೆ ಘೋಷಿಸಿಸಲಾಗಿತ್ತು. ಈಗ ಎಲ್ಲ ಸಾಲ ಮನ್ನಾ ಮಾಡಿ, ಹೊಸ ಸಾಲ ಕೊಡಲಾಗುವುದು. ಹಾಗೇ 1 ಲಕ್ಷದ ವರೆಗೆ ಯಾರು ಈಗಾಗಲೇ ಸಾಲ ಪಾವತಿ ಮಾಡಿದ್ದಾರೋ ಅದನ್ನು ವಾಪಾಸ್ ಕೊಡಲಾಗುವುದು.
- ನೇಕಾರ ಸಮ್ಮಾನ ಯೋಜನೆ ಘೋಷಣೆ ಮಾಡಿದ್ದು, ಇದರ ಮೂಲಕ ಸುಮಾರು 40 ಸಾವಿರ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ರೂಪಾಯಿ ನೀಡಲು ನಿರ್ಧಾರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243