ರಾಜಕೀಯ

ಪತ್ರಿಕೆ ಸಂಪಾದಕರೊಬ್ಬರ ಮುಖವಾಡ ಕಳಚಿದ ಕೋಬ್ರಾ ಪೋಸ್ಟ್ !

Published

on

ಸುದ್ದಿದಿನ ವಿಶೇಷ: ಚುನಾವಣೆ ಸಂದರ್ಭದಲ್ಲಿ ಹಿಂದುತ್ವ ಹಾಗೂ ಇತರೆ ವಿಷಯಗಳ ಮೂಲಕ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಪತ್ರಿಕಾ ಸಂಪಾದಕರ ಮುಖವಾಡವನ್ನು ಕೋಬ್ರಾ ಪೋಸ್ಟ್ ಆನ್ಲೈನ್ ಪತ್ರಿಕೆ ತನ್ನ ಸ್ಟಿಂಗ್ ಆಪರೇಷನ್ ನಲ್ಲಿ ಬಯಲು ಮಾಡಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಿಂದುತ್ವ ಅಜೆಂಡಾ, ಅಮಿತ್ ಷಾ ತಂತ್ರಗಾರಿಕೆ, ಬಿಜೆಪಿಯ ಬೆನ್ನಿಗೆ ನಿಂತು ಕೆಲಸ ಮಾಡಿರುವುದರ ಕುರಿತು ಕನ್ನಡಪ್ರಭ ಪತ್ರಿಕೆ ಸಂಪಾದಕ ರವಿ ಹೆಗಡೆ ಹಾಗೂ ಅವರ ಆಡಳಿತ ಮಂಡಳಿಯ ಇತರೆ ಸದಸ್ಯರು ಸ್ಟಿಂಗ್ ಅಪರೇಷನ್ ನಲ್ಲಿ ಬಾಯಿಬಿಟ್ಟಿದ್ದಾರೆ.

ಸ್ಟಿಂಗ್ ಅಪರೇಷನ್ ನಲ್ಲಿ ಕೋಬ್ರಾ ಪೋಸ್ಟ್ ವರದಿಗಾರ ‘ಹಿಂದುತ್ವ’ ಕುರಿತು ಪತ್ರಿಕೆ ಹೆಚ್ಚು ಪ್ರಚಾರ ಮಾಡಬೇಕೆಂದು ಕೇಳುತ್ತಾನೆ. ಇದಕ್ಕೆ ಕನ್ನಡಪ್ರಭ ಪತ್ರಿಕೆ ಸಂಪಾದಕ ರವಿ ಹೆಗಡೆ ಅವರು ನಾವು ಅದನ್ನೇ ತಾನೇ ಈಗಲೂ ಮಾಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಅಮಿತ್ ಅವರ ಸಂದರ್ಶನ ಪ್ರಕಟಿಸಿದ್ದು ನಾವು ಎಂದು ಹೇಳುತ್ತಾರೆ. ಹೀಗೆ ಸಂಭಾಷಣೆ ಸಾಗುತ್ತದೆ. ರವಿ ಹೆಗಡೆ ಅವರು ಪತ್ರಿಕೆ ಮೂಲಕ ಬಿಜೆಪಿ ಪರ ಕೆಲಸ ಮಾಡುವ ಕುರಿತು ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಾರೆ.

ಈ ಕುರಿತು ಸೋಷಿಯಲ್ ಮಿಡಿಯಾ ಗಳಲ್ಲಿ ಟೀಕೆ ವ್ಯಕ್ತವಾಗಿದೆ. ‘ಹಿಂದುತ್ವ ಎನ್ನುವುದು ಪತ್ರಿಕಾಧರ್ಮವಲ್ಲ ಅದೊಂದು ರಾಜಕಾರಣ. ಪತ್ರಿಕೆ, ಸುದ್ದಿ ಚಾನೆಲ್ ಗಳು ಹೀಗೆ ಒಂದು ಪಕ್ಷದ ಪರವಾಗಿ ಅಜೆಂಡಾಗಳನ್ನು ಪ್ರಚಾರ ಮಾಡಲು ನಿಂತಿವೆ ಅನ್ನುವುದು ಈಗ ಪುರಾವೆ ಸಮೇತ ಸಾಬೀತಾಯಿತು ಎಂದು ರಾಜೇಂದ್ರ ಪ್ರಸಾದ್ ಎಂಬುವರು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡದ ಬಹುತೇಕ ಮಾಧ್ಯಮಗಳು ಒಂದು ಪಕ್ಷದ ಜನಪ್ರತಿನಿಧಿಗಳ ಶೇರಿನಿಂದ ನಡೆಯುತ್ತಿದ್ದ, ಅವು ಆ ಪಕ್ಷದ ಪರವಾಗಿ ಬಹಿರಂಗವಾಗಿ ಪ್ರಚಾರ ಮಾಡವ ರೀತಿಯಲ್ಲಿ ಸುದ್ದಿ ಪ್ರಕಟಿಸುತ್ತಿವೆ. ಇದಕ್ಕೆ ಪೂರಕವಾಗಿದೆ ಹಿಂದುತ್ವದ ಅಜೆಂಡ ಮೂಲಕ ತಮ್ಮ ರಾಜಕೀಯದ ಕಾರ್ಯ ಸಾಧನೆ ಮಾಡುತ್ತಿವೆ. ಇವು ಪ್ರಜ್ಞಾವಂತ ನಾಗರಿಕರಿಗೆ ಗೋಚರಿಸುತ್ತಿವೆಯಾದರೂ ಸಾಮಾನ್ಯ ಜನರ ಅರಿವಿಗೆ ಬರುತ್ತಿಲ್ಲ. ಸದ್ಯ ಕೋಬ್ರಾ ಪೋಸ್ಟ್ ಕೆಲವು ಸಂಪಾದಕರ ಮುಖವಾಡ ಕಳಚುವ ಕಾರ್ಯ ಮಾಡಿದೆ.

ಏನಿದು ಕೋಬ್ರಾ ಪೋಸ್ಟ್‌

ಅನಿರುದ್ಧ ಬೆಹಲ್‌ ಎಂಬುವವರು ಆರಂಭಿಸಿದ ಆನ್ಲೈನ್ ಸುದ್ದಿ ಪತ್ರಿಕೆ ಈ ‘ಕೋಬ್ರಾ ಪೋಸ್ಟ್‌’. ಕಳೆದ ಹದಿನೈದು ವರ್ಷಗಳಲ್ಲಿ ಹಲವು ಪ್ರಮುಖ ಕುಟುಕು ಕಾರ್ಯಾಚರಣೆ ನಡೆಸಿದ್ದು, ಅನೇಕ ಸತ್ಯ ಸಂಗತಿಗಳನ್ನು ಹೊರಗೆಡವಿದೆ ಈಗ ಮತ್ತೊಂದು ಕಾರ್ಯಾಚರಣೆ ಮೂಲಕ ಮಾಧ್ಯಮಗಳ ಭ್ರಷ್ಟಾಚಾರವನ್ನು ಬಯಲು ಮಾಡಿದೆ.

Leave a Reply

Your email address will not be published. Required fields are marked *

Trending

Exit mobile version