ದಿನದ ಸುದ್ದಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬದ ನೆರವಿಗೆ ಲಿಂಗಾಯತ ಸಮುದಾಯ ದೇಣಿಗೆ ಸಂಗ್ರಹ
ಸುದ್ದಿದಿನ,ಶಿವಮೊಗ್ಗ: ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ನೆರವು ನೀಡಲು ಲಿಂಗಾಯತ ಸಮುದಾಯ ನಿರ್ಧರಿಸಿದೆ.
ಗುತ್ತಿಗೆದಾರ ಸಂತೋಷ್ಗೆ ಶಿವಮೊಗ್ಗ ಜಿಲ್ಲೆಯಿಂದಲೇ ಅನ್ಯಾಯವಾಗಿದೆ ಎಂದು ಲಿಂಗಾಯತ ಸಮುದಾಯ ಮುಖಂಡರು ದೇಣಿಗೆ ಅಭಿಯಾನ ಶಿವಮೊಗ್ಗ ಜಿಲ್ಲೆಯಲ್ಲೇ ಆರಂಭಿಸಲಿದ್ದಾರೆ.
ಸಂತೋಷ್ ಕುಟುಂಬಕ್ಕೆ ನೀಡಲು ನಾಳೆಯಿಂದಲೇ ಶಿವಮೊಗ್ಗ ಜಿಲ್ಲೆಯಲ್ಲಿ ದೇಣಿಗೆ ಸಂಗ್ರಹ ಕಾರ್ಯ ನಡೆಯಲಿದ್ದು, ಶಿವಮೊಗ್ಗ ನಗರ, ಭದ್ರಾವತಿ, ಸಾಗರ ಸೇರಿದಂತೆ ಎಲ್ಲಾ ತಾಲೂಕಗಳಲ್ಲಿ ದೇಣಿಗೆ ಸಂಗ್ರಹ ನಡೆಯಲಿದೆ.
ಸಂತೋಷ್ ಭಾವಚಿತ್ರವಿಟ್ಟು ತೆರೆದ ವಾಹನದಲ್ಲಿ ಶಿವಮೊಗ್ಗ ನಗರದಲ್ಲಿ ದೇಣಿಗೆ ಸಂಗ್ರಹಕ್ಕೆ ಸಿದ್ದತೆ ನಡೆಸಲಾಗಿದ್ದು, ಲಿಂಗಾಯತರು ಹೆಚ್ಚು ಭೇಟಿ ನೀಡುವ ದೇವಾಲಯ ಮತ್ತು ಮುಖಂಡರ ಮನೆಯಲ್ಲೂ ದೇಣಿಗೆ ಸಂಗ್ರಹಿಸಲಿದ್ದಾರೆ. ಸಂಗ್ರಹಿಸಿದ ಹಣವನ್ನು ಏಪ್ರಿಲ್ 23ರಂದು ಸಂತೋಷ್ ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243