ದಿನದ ಸುದ್ದಿ
ಕಾರು ಬೈಕ್ ಗೆ ಡಿಕ್ಕಿ : ದಾವಣಗೆರೆ ವಿವಿ ವಿದ್ಯಾರ್ಥಿನಿ ಸಾವು
ಸುದ್ದಿದಿನ,ದಾವಣಗೆರೆ: ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದಾವಣಗೆರೆ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ದಾವಣಗೆರೆ ವಿಶ್ವವಿದ್ಯಾಲಯ ಮುಂಭಾಗದಲ್ಲಿ ಶನಿವಾರ ನಡೆದಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗಣಿತ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಶೈಲಜಾ (23) ಮೃತ ವಿದ್ಯಾರ್ಥಿನಿ. ಶನಿವಾರ ಮಧ್ಯಾಹ್ನ ವೇಳೆ ಕಾಲೇಜ್ ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ದಾವಣಗೆರೆ ವಿವಿಯ ಮುಖ್ಯ ಗೇಟ್ ನಿಂದ ಹೊರ ಹೋಗುವಾಗ ಅತೀವೇಗವಾಗಿ ಬಂದ ಕಾರು ಬೈಕ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ತಕ್ಷಣ ಶೈಲಜಾ ತಲೆಗೆ ಬಲವಾಗಿ ಹೊಡೆತ ಬಿದ್ದು ರಕ್ತ ಸ್ರಾವ ಆಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯುವ ವೇಳೆ ರಸ್ತೆ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆ.
ವಿದ್ಯಾರ್ಥಿಗಳ ಆಕ್ರೋಶ
ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ ಕಾಲೇಜ್ ಮುಂಭಾಗದಲ್ಲಿ ಹಾದು ಹೋಗಿದ್ದು ವಾಹನಗಳ ದಟ್ಟನೆ ಹೆಚ್ಚಾಗಿದೆ. ಅತ್ಯಂತ ವೇಗದಲ್ಲಿ ವಾಹನಗಳನ್ನು ಚಲಾಯಿಸಲಾಗುತ್ತಿದೆ. ವಿದ್ಯಾರ್ಥಿಗಳು ರಸ್ತೆಯನ್ನು ದಾಟ್ಟುವಾಗ ಸಾಕಷ್ಟು ಅಪಘಾತಗಳಾಗಿವೆ. ಯಾವುದೇ ಸೂಚನೆ ಫಲಕಗಳಿಲ್ಲ.
ಹಾಗೂ ತಕ್ಷಣ ವಿವಿ ಮುಂಭಾಗದಲ್ಲಿ ವಾಹನಗಳು ನಿಧಾನ ಗತಿಯಲ್ಲಿ ಸಂಚಾರಿಸುವಂತೆ ಕ್ರಮ ವಹಿಸಬೇಕು. ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವ ವಿದ್ಯಾರ್ಥಿನಿ ಶೈಲಜಾ ಸಾವಿಗೆ ರಾಜ್ಯ ರಸ್ತೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ವಿವಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243