ಸಿನಿ ಸುದ್ದಿ
ಮೇಕಪ್ ಹಚ್ಚುವಾಗಲೇ ಹೃದಯಾಘಾತ : ಸ್ಯಾಂಡಲ್ ವುಡ್ ನ ಹಾಸ್ಯ ಕಲಾವಿದ ಸುಧಾಕರ್ ನಿಧನ
ಸುದ್ದಿದಿನ, ಬೆಂಗಳೂರು : ಹಿರಿಯ ಸಿನಿಮಾ ಕಲಾವಿದರಾದ ರಾಕ್ ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ಇವರು ಕನ್ನಡ ಹಲವು ಸಿನೆಮಾಗಳಲ್ಲಿ ಹಾಸ್ಯ ನಟರಾಗಿ ಜನರ ಮನಸ್ಸನ್ನು ಗೆದ್ದಿದ್ದರು. ಟಗರು, ಮನಸಾರೆ, ಅಧ್ಯಕ್ಷ ಸಿನೆಮಾಗಳು ಇವರಿಗೆ ತುಂಬಾ ಹೆಸರು ತಂದುಕೊಟ್ಟಿದ್ದವು. ಸುಧಾಕರ್ ಸಾವಿಗೆ ಸ್ಯಾಂಡಲ್ ವುಡ್ ಸಂತಾಪ ಸೂಚಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243