ದಿನದ ಸುದ್ದಿ

ಕಾಮಿಡಿ ಕಿಲಾಡಿ ಜೋಡಿ ‘ದಂಪತಿಗಳಾಗೋಕೆ’ ಸಜ್ಜಾದ್ರು..!

Published

on


ಸುದ್ದಿದಿನ ಡೆಸ್ಕ್ : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀಸನ್ 1ರ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಜನರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದ ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆಯ ಕಡಬಗೆರೆಯವರಾದ ಗೋವಿಂದೇ ಗೌಡ ಅವರು ಕಡುಬಡತನದ ಕುಟುಂಬದಿಂದ ಬಂದವರು. ನಟನೆಯಲ್ಲಿ ಅಪಾರ ಆಸಕ್ತಿ ಇದ್ದ ಇವರು ಕಾಮಿಡಿ ಕಿಲಾಡಿಯ ಆಡಿಷನ್ ನಲ್ಲಿ ಆಯ್ಕೆಯಾಗದರು. ನಂತರ ನಿಮಗೇ ತಿಳಿದ ಹಾಗೆ ಇವರ ನಟನೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದು ಎಲ್ಲರಿಗೂ ತಿಳಿದಿದೆ.

ದಿವ್ಯಾಶ್ರೀಯವರು ಕೂಡ ಆಡಿಷನ್ ಮೂಲಕ ಕಾಮಿಡಿ ಕಿಲಾಡಿಗಳು ಶೋಗೆ ಆಯ್ಕೆಯಾಗಿ ಬಂದವರೇ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಗೆರೆಯವರು. ಇವರೂ ಕೂಡ ಈ ಶೋನಲ್ಲಿ ತಮ್ಮದೇ ವಿಶಿಷ್ಠವಾದ ನಟೆಯ ಮೂಲಕ ಜನಮನ ಗೆದ್ದವರೇ.

ಅಂದಹಾಗೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ ಇವರಿಬ್ಬರ ಮನಸ್ಸು ಪ್ರೀತಿಗೆ ಜಾರಿ ಈಗ ಸತಿ-ಪತಿಗಳಾಗಿ ಜೀವನ ನಡೆಸಲು ಮನಸ್ಸುಮಾಡಿದ್ದಾರೆ‌. ಇದೇ ತಿಂಗಳ 27ಕ್ಕೆ ಇವರ ನಿಶ್ಚಿತಾರ್ಥ ನಡೆಯಲಿದ್ದು, ಮಾರ್ಚ್ 14 ಕ್ಕೆ ಶೃಂಗೇರಿಯಲ್ಲಿ ವಿವಾಹವಾಗಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version