ಕ್ರೀಡೆ

ಕಾಮನ್ ವೆಲ್ತ್ ಕ್ರೀಡಾಕೂಟ : ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

Published

on

ಸುದ್ದಿದಿನ ಡೆಸ್ಕ್ : ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ (Birmingham 2022 Commonwealth Games) ವೇಟ್ ಲಿಫ್ಟಿಂಗ್‌ನ (weight lifting) 67 ಕೆ.ಜಿ. ಪುರುಷರ ವಿಭಾಗದಲ್ಲಿ ಜೆರೆಮಿ ಲಾಲ್ ರಿನ್ ನುಂಗ ( Jeremy Lalrinnunga) ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ | ರಾಜ್ಯದಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿಲ್ಲ : ಸಚಿವ ಡಾ. ಕೆ. ಸುಧಾಕರ್

ಈ ಮೂಲಕ ಭಾರತ 2ನೇ ಚಿನ್ನದ ಪದಕಕ್ಕೆ ಪಾತ್ರವಾಗಿದೆ. ಜೆರೆಮಿ ಲಾಲ್ ರಿನ್ ನುಂಗ ಒಟ್ಟಾರೆ 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಚಿನ್ನದ ಪದಕ ಪಡೆದ ಜೆರೆಮಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅಭಿನಂದಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version