ದಿನದ ಸುದ್ದಿ
ಕೆನಡಾದಲ್ಲಿ ಇಂದಿನಿಂದ 65ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನ; ಸ್ಪೀಕರ್ ಓಂ ಬಿರ್ಲಾ ನೇತೃತ್ವದ ಭಾರತೀಯ ನಿಯೋಗ ಭಾಗಿ
ಸುದ್ದಿದಿನ ಡೆಸ್ಕ್ : ಕೆನಡಾದ ಹಾಲಿಫ್ಯಾಕ್ಸ್‌ನಲ್ಲಿ ಇಂದಿನಿಂದ ಆರಂಭವಾಗಲಿರುವ 65 ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ( commonwealth ministerial conference ) ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla Speaker of the Lok Sabha ) ನೇತೃತ್ವದ ಭಾರತೀಯ ಸಂಸದೀಯ ನಿಯೋಗ ಭಾಗವಹಿಸಲಿದೆ.
ಈ ಸಮಾವೇಶ ಇಂದಿನಿಂದ ಇದೇ 26ರವರೆಗೆ ನಡೆಯಲಿದ್ದು, ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಭಾರತದಿಂದ 23 ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು 16 ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
ಭಾರತದ ಹಲವಾರು ಸಂಸದರಾದ ಸುನಿತಾ ದುಗ್ಗಲ್, ನೀರಜ್ ಶೇಖರ್, ಸಂತೋಷ್ ಕುಮಾರ್, ಡಾ.ಕನಿಮೋಳಿ ಎನ್.ವಿ.ಎನ್.ಸೋಮು ಸೇರಿದಂತೆ ಹಲವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಎಂಟು ಕಾರ್ಯಾಗಾರಗಳು ನಡೆಯಲಿವೆ. ಸ್ಪೀಕರ್ ಓಂ ಬಿರ್ಲಾ ಅವರು, ’ಪೀಪಲ್ಸ್ ಪಾರ್ಲಿಮೆಂಟ್: ಆವಿಷ್ಕಾರದ ಮೂಲಕ ಪ್ರವೇಶಿಸುವಿಕೆ’ ಕುರಿತು ಕಾರ್ಯಾಗಾರದಲ್ಲಿ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಕೆನಡಾ ಭೇಟಿಯ ಸಂದರ್ಭದಲ್ಲಿ ಓಂ ಬಿರ್ಲಾ ಅವರು, ಇತರ ಕಾಮನ್‌ವೆಲ್ತ್ ದೇಶಗಳ ತಮ್ಮ ಸಹವರ್ತಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲದೆ, ವ್ಯಾಪಾರ ಸಮುದಾಯ ಮತ್ತು ಭಾರತೀಯ ಸಮುದಾಯ ಉದ್ದೇಶಿಸಿಯೂ ಮಾತನಾಡಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243