ರಾಜಕೀಯ
ಕಾಂಗ್ರೆಸ್‌ನವರು ದರಿದ್ರ ನನ್ಮಕ್ಕಳು : ಮಾಜಿ ಶಾಸಕ ನಂಜೇಗೌಡ
ಸುದ್ದಿದಿನ,ಹಾಸನ: ಕಾಂಗ್ರೆಸ್‌ನವರು ದರಿದ್ರ ನನ್ಮಕ್ಕಳು, ಅವರ ಜೊತೆ ಹೋಗಬಾರದಿತ್ತು ಎಂದು ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ನಂಜೇಗೌಡ ವಾಗ್ದಾಳಿ ನಡೆಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರಕಟ್ಟೆಯಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕುಮಾರಣ್ಣನ ತರ ಮುಖ್ಯಮಂತ್ರಿ ಸಿಗಲ್ಲ. ಕುಮಾರಣ್ಣ ಯಾವಾಗಲೂ 25-50 ಸಾವಿರದ ಬಟ್ಟೆ ಹಾಕಿಕೊಂಡು ಓಡಾಡಲ್ಲ.
ಒಂದು ಶರ್ಟ್, ಒಂದು ಪ್ಯಾಂಟ್, ಒಂದು ಜೊತೆ ಚಪ್ಪಲಿ. ಯಾವಾಗಲೂ ರೈತರಪರ ಚಿಂತನೆ ಮಾಡುವ ಶಕ್ತಿ ಅವರು. ಕಾಂಗ್ರೆಸ್‌ನವರು ಬರೀ ಹನ್ನೆರಡು, ಹದಿಮೂರು ತಿಂಗಳು ಅಧಿಕಾರ ಕೊಟ್ಟರು. ಈ ಕಾಂಗ್ರೆಸ್‌ನವರು ದರಿದ್ರ ನನ್ಮಕ್ಕಳು, ಅವರ ಜೊತೆ ಹೋಗಬಾರದಿತ್ತು.
ಏನೋ ಪಾಪ ಹೋಗಿಬಿಟ್ಟರು, ಆ ಬಡ್ಡಿಮಕ್ಕಳು ಆಗಲೇ ಕಿತ್ತುಕೊಂಡು ಬಿಟ್ಟರು. ಐದು ವರ್ಷ ಕೊಟ್ಟಿದ್ದರೆ, ರೈತರಪರ ಯಾವ ರೀತಿ ಕೆಲಸ ಮಾಡಬೇಕು ಅನ್ನೋದನ್ನ ತೋರಿಸುತ್ತಿದ್ದರು ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243