ದಿನದ ಸುದ್ದಿ
ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಬಿಜೆಪಿಯು ತನ್ನ ರಣಹೇಡಿ ನಿಲುವನ್ನು ಸಾಭೀತು ಪಡಿಸಿದೆ : ಡಿ.ಕೆ ಶಿವಕುಮಾರ್ ಆಕ್ರೋಶ
ಸುದ್ದಿದಿನ ಡೆಸ್ಕ್ : ಇಂದು ದೆಹಲಿಯಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಹರೀಶ್ ರಾವತ್ ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಬಿಜೆಪಿ ತನ್ನ ರಣಹೇಡಿ ನಿಲುವನ್ನು ಸಾಭೀತುಪಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ದನಿ ಎತ್ತಿದವರ ಮನೆಗೆ ಬುಲ್ಡೋಜರ್ ಹತ್ತಿಸುತ್ತೀರಿ,ಅನ್ಯಾಯದ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರಿಗೆ ಇಡಿಮೂಲಕ ಬೆದರಿಕೆ ಹಾಕಿಸುತ್ತೀರಿ, ಇದೇನಾ ನಿಮ್ಮ ಆಡಳಿತದ ಮಾದರಿ?. ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಪ್ರತಿಭಟಿಸಿದ ಬಿಜೆಪಿ ನಾಯಕರ ಮೇಲೆ ಇದೇ ರೀತಿಯ ಸೇಡಿನ ರಾಜಕೀಯ ಮಾಡಿದ್ದರೆ ಇಂದು ಬಿಜೆಪಿ ಪಕ್ಷದವರು ಬೀದಿಯಲ್ಲಿ ಇರಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243