ರಾಜಕೀಯ
ಅಟಲ್ ಸಾವಿನ ವಿಚಾರದಲ್ಲಿ ಮೋದಿ ನಾಟಕ: ಖರ್ಗೆ
ಸುದ್ದಿದಿನ ಡೆಸ್ಕ್: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿನ ವಿಚಾರದಲ್ಲಿ ನಾಟಕ ಮಾಡುತ್ತಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ, ಸಂಸದ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಸಾವಿನ ವಿಷಯದಲ್ಲಿ ಮೋದಿ ನಾಟಕ ಮಾಡುತ್ತಿದ್ದು ಅದನ್ನು ಬಂದ್ ಮಾಡಲಿ ಎಂದಿದ್ದಾರೆ.
ಬದುಕಿದ್ದಾಗ ಪ್ರಧಾನಿ ಮೋದಿ ವಾಜಪೇಯಿ ಅವರನ್ನು ಎಷ್ಟು ಬಾರಿ ಭೇಟಿ ಮಾಡಿದ್ದಾರೆ, ಜೀವಂತವಿದ್ದಾಗ, ಅವರ ಕಡೆ ತಿರುಗಿಯೂ ನೋಡದ ಮೋದಿ, ನಿಧನರಾದ ಬಳಿಕ ಇನ್ನಿಲ್ಲದ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.