ರಾಜಕೀಯ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ : ಸಿದ್ದರಾಮಯ್ಯ
ಸುದ್ದಿದಿನ ಡೆಸ್ಕ್ : ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತೆದೆ ಎಂದು ನಿನ್ನೆ ಹೊಳೆನರಸೀಪುರದಲ್ಲಿ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥನೆ ಕೊಟ್ಟಿದ್ದಾರೆ. ಹಾಗೇ ಜನರು ಮತ್ತೆ ಮುಖ್ಯಮಂತ್ರಿ ಆಗಬೇಕು ಅಂತಾ ಹೇಳಿದರು, ಅದಕ್ಕೆ ನಾನು ಹಾಗೆ ಹೇಳಿರುವೆ ಎಂದು ತಮ್ಮ ಮನದಿಂಗಿತ ಹೊರಹಾಕಿದರು.
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೊಡಗು ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದ್ದು ಶೀಘ್ರವೆರ ಪರಿಹಾರ ಘೋಷಿಸಬೇಕು. ನಿನ್ನೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದ ಪ್ರತಿನಿಧಿಯಾಗಿ ಬಂದಿದ್ದರು.ಬರುವ ಮುನ್ನ ಪ್ರಧಾನಿ ಜೊತೆ ಪರಿಹಾರ ಸಂಬಂಧ ಚರ್ಚಿಸಿ ಬರಬೇಕಾಗಿತ್ತು.ಅವರು ಪರಿಹಾರ ಘೋಷಿಸದೆ ಹೋದದ್ದು ಸರಿಯಲ್ಲ.ಸಂಸದ ಪ್ರತಾಪಸಿಂಹ ಕೇವಲ ಭಾಷಣ ಮಾಡಲು ಲಾಯಕ್ಕು ಅವರು
ಕೇಂದ್ರದ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ನೆರೆ ಪರಿಹಾರಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಸ್ಪಂದನೆಗೆ ನಾನು ಧನ್ಯವಾದ ಹೇಳುವೆ. ಸೆಪ್ಟೆಂಬರ್ 3ರಂದು ಲಂಡನ್ ಪ್ರವಾಸ ಕೈಗೊಂಡಿರುವೆ. ಸಿಎಂ ಆಗಿದ್ದಾಗಿನಿಂದಲೂ ಅಲ್ಲಿರುವ ನನ್ನ ಸ್ನೇಹಿತ ಕರೆಯುತ್ತಿದ್ದ, ಈಗ ಬಿಡುವಿನಲ್ಲಿ ಹೋಗಿ ಬರಲು ನಿರ್ಧಾರಮಾಡಿದ್ದು, ನಾನು ನನ್ನ ಪುತ್ರ ಯತೀಂದ್ರ, ಸಚಿವರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401