ದಿನದ ಸುದ್ದಿ
ಶಾಸಕರ ಹಿಡಿತ ತಪ್ಪಿದ ‘ಕೈ’ ಕಾರ್ಯಕರ್ತರಲ್ಲಿ ಶಂಕೆ
-
- ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಸಮುದಾಯದ ಭದ್ರ ಕೋಟೆಯಲ್ಲಿ ಬಹುದಿನದ ಕನಸು ನನಸಾಗಲಿಲ್ಲ
ಸಮುದಾಯಕ್ಕೆ ಸರ್ಮಪಣೆ ‘ಕೈ’ ಸಾಧನಾ ಸಮಾವೇಶ
ಸುದ್ದಿದಿನಡೆಸ್ಕ್:ಎರಡು ವರ್ಷ ಕಳೆದರೂ ರೈತರ ಜೀವನಾಡಿಯಾದ ವಿಜಯನಗರ ಜಿಲ್ಲೆಯ ಸಕ್ಕರೆ ಕಾರ್ಖಾನೆ ನಿರ್ಮಾಣ ಆಗದೇ ಇರೋದು ಜೊತೆಗೆ ತುಂಗಭದ್ರಾ ಜಲಾಶಯದ ಹೂಳು ಎತ್ತದೆ ಇರೋದು ದೊಡ್ಡ ದುರಂತವಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಕ್ಕರೆ ಕಾರ್ಖಾನೆ ಆರಂಭವಾಗಿಲ್ಲ ಎಂದು ಸಾರ್ವಜನಿಕರ ವಲಯದಲ್ಲಿ ವಿಜಯನಗರ ಜಿಲ್ಲೆಗೆ ಬಹಳ ಅನಾಯ್ಯವಾಗಿದೆ ಅನುದಾನ ಬಿಡುಗಡೆಯಲ್ಲಿ ಮತ್ತು ಸ್ವಪಕ್ಷದ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದ ಶಾಸಕ ಗವಿಯಪ್ಪ
ಯಾವುದೇ ಅಭಿವೃದ್ಧಿ ಗಳನ್ನು ಕೈಗೊಳ್ಳದೇ, ಯೋಜನೆಗಳಿಗೆ ಶಿಲಾನ್ಯಾಸ ಮಾಡದೇ ವಿಜಯನಗರದ ಜಿಲ್ಲೆಯಲ್ಲಿ ಎರಡು ವರ್ಷದ ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ.
ಸ್ವಪಕ್ಷದ ವಿರುದ್ಧವೇ ಮುನಿಸಿಕೊಂಡ ಶಾಸಕ ಗವಿಯಪ್ಪ ಅವರು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಭಾಗಿನ ಕಾರ್ಯಕ್ರಮದಲ್ಲಿ ಮುನಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗದೇ ವಾಪಾಸು ಹೋಗಿದ್ದರು. ಅವರ ಕಛೇರಿಯವರೆಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಕರೆಯಲು ಹೋದರೂ ಸಹ ಬರಲಿಲ್ಲ. ಇದರಿಂದ ಸಹ ಶಾಸಕರು ಸಿಎಂ ಮೇಲೆ ಮುನಿಸಿಕೊಂಡರು.
ಜಿಲ್ಲೆಯ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಪತ್ರಿಕಾಗೋಷ್ಟಿಯಲ್ಲಿ ಶಾಸಕ ಗವಿಯಪ್ಪ ವಿರುದ್ಧ ಇವರು ಕ್ಷೇತ್ರಕ್ಕೆ ‘ಶಾಪ’ ಎಂದು ಹೇಳಿ, ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಕಾರ್ಯಕರ್ತರ ನಡುವೆ ಅಸಮಾಧಾನಗಳ ನಡುವೆ ಸ್ವಪಕ್ಷಗಳಿಂದ ಶಿರಾಜ್ ಶೇಖ್ ಮತ್ತು ಮಾಜಿ ಶಾಸಕ ಭೀಮಾನಾಯ್ಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಇವರಿಬ್ಬರ ನಡುವಿನ ಜಗಳ ಸಮಾಧಾನ ಮಾಡಲು ಕೆ.ಪಿ.ಸಿ.ಸಿ ಮಧ್ಯೆ ಪ್ರವೇಶ ಮಾಡಿ ಸಂಧಾನ ಮಾಡುವಲ್ಲಿ ವಿಫಲವಾಯಿತು.
ಸಾಧನೆ ಮತ್ತು ಸಮರ್ಪಣೆ ಇವುಗಳಲ್ಲಿ ಯಾವುದನ್ನು ಮಾಡುತ್ತಾರೋ ಅವರಲ್ಲಿಯೇ ಗೊಂದಲ ಇದೆ. ಯಾವುದು ಸಮರ್ಪಣೆ ?, ಯಾವುದು ಸಾಧನೆ ? ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿ ಅವಳಿ ಜಿಲ್ಲೆಗೆ ಸಚಿವರನ್ನು ನೇಮಕ ಮಾಡದೇ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ ಎನ್ನುವುದು ಸಾರ್ವಜನಿಕರಲ್ಲಿ, ರಾಜಕೀಯದಲ್ಲಿ ಗೊಂದಲ ನಿರ್ಮಾಣ ಮಾಡಿದೆ.
ಜಿಲ್ಲೆಯಲ್ಲಿ ಶಾಸಕಾಂಗ ಮತ್ತು ಆಡಳಿತದಲ್ಲಿ ಒಂದೇ ಸಮುದಾಯದವರು ಇರೋದರಿಂದ ಅಭಿವೃದ್ಧಿ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎನ್ನುವ ಮಾಹಿತಿಯನ್ನು ಈ ಕ್ಷೇತ್ರದ ಜನರಿಗೆ ತಿಳಿಸಲು ಈ ಸಮರ್ಪಣೆ ಕಾರ್ಯಕ್ರಮ ಮಾಡುತ್ತಿದ್ದಾರೆ.
ದಿವಂಗತ ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧೀ ಕಟ್ಟೆಯನ್ನು ನಾಲ್ಕು ದಿನಗಳಲ್ಲಿ ಅಭಿವೃದ್ಧಿ ಪಡಿಸಿರುವುದು ವಿಜಯನಗರ ಕ್ಷೇತ್ರದ ಜನರಿಗೆ ಹಾಗು ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಗವಿಯಪ್ಪ ನೀಡುತ್ತಿರುವುದು ಬಹು ದೊಡ್ಡ ಕೊಡುಗೆ ಆಗಿದೆ.
ಇನ್ನು ಈ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಸಮರ್ಪಣೆ, ಸಾಧನ ಸಮಾವೇಶ ಮಾಡಿದರೆ ಶಾಸಕ ಗವಿಯಪ್ಪ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎನ್ನುವ ಹಿಂಬಾಲಕರ ನಿರೀಕ್ಷೆ ಸಹ ಇದೆ.
2025 ಮೇ 20 ರಂದು ನಡೆಯುವ ಜಿಲ್ಲೆಯ ಪುನೀತ್ ರಾಜ್ ಕುಮಾರ್ ಮೈದಾನದಲ್ಲಿ ಸಾಧನ ಸಮಾವೇಶದಲ್ಲಿ ಎಷ್ಟೆಲ್ಲಾ ಗೊಂದಲದ ನಡುವೆ ಯಶಸ್ವಿಯಾಗುವುದೇ ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆ ಆಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243