/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ನಾಳೆ ‘ಪ್ರಜಾ ಪರಿವರ್ತನಾ ವೇದಿಕೆ’ಯಿಂದ ‘ಸಂವಿಧಾನ ಜಾಗೃತಿ ಅಭಿಯಾನ’ ಸಮಾರಂಭ

Published

on

‍‍‌ಸುದ್ದಿದಿನ ಡೆಸ್ಕ್ : ಭಾರತದ ಸಂವಿಧಾನ ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದೇ ಪ್ರತಿಯೊಬ್ಬ ಭಾರತೀಯನ ಹೆಗ್ಗಳಿಕೆ. ಮೌಡ್ಯ ಕಂದಾಚಾರದಂತಹ ಅನಿಷ್ಟಪದ್ದತಿಗಳನ್ನು ಧಿಕ್ಕರಿಸಿ ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿರುವ ನಮ್ಮ ಸಂವಿಧಾನ ಸರ್ವಕಾಲಕ್ಕೂ ಮಾನ್ಯವಾಗುವಂತಹ ಕಾನೂನುಗಳನ್ನು ಹೊಂದಿದೆ. ಹತ್ತಾರು ಧರ್ಮೀಯರು ವಿಭಿನ್ನ ಸಂಸ್ಕೃತಿಯ ಸಾವಿರಾರು ಜಾತಾಗಳನ್ನ ಹೊಂದಿರುವ ಭಾರತದಂಥ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ವತಂತ್ರ್, ಸಮಾನತೆ, ಸಹೋದರತೆಯಂತಹ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ರೂಪಿತವಾಗಿರುವ ಸಂವಿಧಾನ ಭಾರತದ ದೇಶದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದೆ‌.

ಸಂವಿಧಾನ ಜಾರಿಯಾದ ದಿನದಿಂದ ಇಂದಿನವರೆಗೆ ದೇಶವನ್ನಾಳಿದ ಮನುವಾದಿ ಸರ್ಕಾರಗಳು ಯಥಾವತ್ತಾಗಿ ಸಂವಿಧಾನವನ್ನು ಜಾರಿಮಾಡಿದ್ಥರೆ ಭಾರತದ ಇಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ ಚಿತ್ರಣವೇ ಬೇರೆಯಾಗಿರುತ್ತಿತ್ತು. ಆದರೇ ಸಾಮಾಜಿಕ ಬದಲಾವಣೆ ಒಪ್ಪದ ಮನುವಾದಿಗಳು ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿಲ್ಲ ಜೊತೆಗೆ ಸಂವಿಧಾನದ ಬಗ್ಗೆ ದೇಶವಾಸಿಗಳಲ್ಲಿ ಜಾಗೃತಿ ಮೂಡಿಸಲಿಲ್ಲ. ಅದರ ಪರಿಣಾಮವಾಗಿ ಇಡೀ ಜಗತ್ತು ಮೆಚ್ಚುವ ಸಂವಿಧಾನವನ್ನು ಭಾರತೀಯರೇ ಗೌರವಿಸುತ್ತೀಲ್ಲ ಬದಲಾಗಿ ಮನುವಾದಿಗಳು ಸಂವಿಧಾನವನ್ನು ಬದಲಿಸುವ ಮಾತನಾಡಿದಾಗ, ಅದರ ಪ್ರತಿಗೆ ಬೆಂಕಿಹಂಚಿದಾಗ ಸಂವಿಧಾನದ ಅಡಿಯಲ್ಲಿ ಬದುಕುವ ನಾಗರಿಕರಷ್ಟೆ ಅಲ್ಲ, ಸಂವಿಧಾನ ಬದ್ಧವಾಗಿ ರಚನೆಯಾಗಿರುವ ಸರ್ಕಾರವು ಮೌನವಹಿಸುತ್ತದೆ.

ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಏಕಾಂಗಿಯಾಗಿ 2 ವರ್ಷ 11 ತಿಂಗಳವರೆಗೆ ಸಂವಿಧಾನ ರಚನೆಯಲ್ಲಿ ತೊಡಗಿಕೊಂಡು ನಂತರ ಸಂವಿಧಾನದ ಮೇಲೆ ಸದನದಲ್ಲಿ 166 ದಿನಗಳ ಸುದೀರ್ಘ ಚರ್ಚೆ ನಡೆಸಿ, ಸುಮಾರು 7635 ಪ್ರಶ್ನೆಗಳಲ್ಲಿ 5162 ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರವನ್ನು ನೀಡಿ 2473 ಪ್ರಶ್ನೆಗಳನ್ನು ಸಲಹೆಯಾಗಿ ಸ್ವೀಕರಿಸಿ ಅಂತಿಮವಾಗಿ ಸದನ ಸಮಿತಿಯ ಎಲ್ಲಾ ಪ್ರತಿನಿಧಿಗಳ ಒಪ್ಪಿಗೆಯಂತೆ 1950 ಜನವರಿ 26 ರಂದು ಸಂವಿಧಾನ ಜಾರಿಯಾಯಿತು.

ಸಂವಿಧಾನದ ಆಶಯಗಳು ಜಾರಿಯಾಗಿದೆ ಈ ದೇಶದ ಸಮಸ್ತ ಅಭಿವೃದ್ದಿ ಸಾಧ್ಯವಿಲ್ಲ. ಅದಕ್ಕಾಗಿ ಸಂವಿಧಾನದ ಜಾರಿಗಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಹೋರಾಟ ನಡೆಸಬೇಕಿದೆ, ಬಹುಮುಖ್ಯವಾಗಿ ಸಂವಿಧಾನದ ರಕ್ಷಣೆಯ ಹೊಣೆಯನ್ನು ದಲಿತ, ಹಿಂದೂಳಿದ, ಅಲ್ಪಸಂಖ್ಯಾತ ಸಮುದಾಯಗಳು ಹೊರಬೇಕಾಗಿದೆ. ಈ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಪ್ರಯತ್ನವಾಗಿ ಪ್ರಜಾ ಪರಿವರ್ತನಾ ವೇದಿಕೆ ದಾವಣಗೆರೆ ಜಿಲ್ಲಾ ಸಮಿತಿಯು ನಾಳೆ, 31/01/2019 ರ ಗುರುವಾರ ಬೆಳಿಗ್ಗೆ 11-30 ಕ್ಕೆ ದಾವಣಗೆರೆಯ ರೋಟರಿ ಬಾಲಭವನದಲ್ಲಿ ”ಸಂವಿಧಾನ ಜಾಗೃತಿ ಅಭಿಯಾನ” ಸಮಾರಂಭದ ಉದ್ಘಾಟನೆಯನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮ ವಿವರ

ಜನರು ಸರ್ವಸಮಾನರಾಗಿ ಶೋಷಣೆ ಮುಕ್ತರಾಗಿ ಜೀವಿಸಲು ಸಂವಿಧಾನ ಬಹಳ ಮುಖ್ಯವಾಗಿ ಬೇಕಾಗುವ ಗ್ರಂಥವೇ ಸರಿ. ಸಂವಿಧಾನ ಜನರ ಜೀವನದ ಅವಿಭಾಜ್ಯ ಅಂಗವಾದಾಗ ಸಂವಿಧಾನದ ರಕ್ಷಣೆ ಸಾಧ್ಯ ಎಂದು ಹೇಳುತ್ತಾ, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ನಾಡಿನ ಹಾಗೂ ಜಿಲ್ಲೆಯ ಎಲ್ಲಾ ಪ್ರಗತಿಪರರು, ಚಿಂತಕರು, ಸಂಘಸಂಸ್ಥೆಯ ಪದಾಧಿಕಾರಿಗಳು, ನಾಗರಿಕರು, ಹಾಗೂ ಎಲ್ಲಾಕ್ಕಿಂತ ಹೆಚ್ಚಾಗಿ ನನ್ನೆಲ್ಲಾ ಬಹುಜನ ಬಂಧುಗಳು ಭಾಗವಹಿಸುವಂತೆ ಈ ಮೂಲಕ ಕೋರಿಕೆಯನ್ನು ಸಲ್ಲಿಸುತ್ತಿದ್ದೇವೆ.

ಈ ನಮ್ರ ಪ್ರಯತ್ನಕ್ಕೆ ಸಹಸ್ರಾರು ಜನರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭೀಮ ವಿನಂತಿ ಸಲ್ಲಿಸುತ್ತೇವೆ.

-ಪ್ರಜಾ ಪರಿವರ್ತನಾ ವೇದಿಕೆ
ಜಿಲ್ಲಾ‌ಸಮಿತಿ ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version